ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಕುಟುಂಬದ 12 ಜನರಿಗೆ ಪಾಸಿಟಿವ್

ಜಿಲ್ಲೆಯಲ್ಲಿ ಒಂದೇ ದಿನ 49 ಮಂದಿಗೆ ಪಾಸಿಟಿವ್‌, 52 ಮಂದಿ ಗುಣಮುಖ
Last Updated 6 ಜುಲೈ 2020, 1:04 IST
ಅಕ್ಷರ ಗಾತ್ರ

ಕಲಬುರ್ಗಿ: ಜೇವರ್ಗಿ ತಾಲ್ಲೂಕಿನ ಆಂದೋಲಾ ಗ್ರಾಮದ ಒಂದೇ ಕುಟುಂಬದ 12 ಜನ ಸೇರಿದಂತೆ ಭಾನುವಾರ ಒಟ್ಟು 49 ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 1646ಕ್ಕೆ ಏರಿದೆ. ಇನ್ನೊಂದೆಡೆ, 52 ಮಂದಿ ಗುಣಮುಖರಾಗಿದ್ದು, ಇವರ ಸಂಖ್ಯೆ 1241ಕ್ಕೆ ಏರಿದೆ. ಇನ್ನೂ 378 ಸೋಂಕಿತರು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿದ್ದಾರೆ.

ನಗರದ ಸಂಗಮೇಶ್ವರ ಕಾಲೊನಿಯ ಬ್ಯಾಂಕ್‌ ವ್ಯವಸ್ಥಾಪಕರೊಬ್ಬರಿಗೂ ಕೋವಿಡ್‌ ಅಂಟಿಕೊಂಡಿದೆ. ಇದರಿಂದ ಭಾನುವಾರವೇ ಬ್ಯಾಂಕ್‌ನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸೋಂಕಿತರಲ್ಲಿ 33 ಪುರುಷರು ಮತ್ತು 16 ಮಹಿಳೆಯರು ಇದ್ದಾರೆ. ಇದರಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ 9 ಮಂದಿ, ಅಂತರ್‌ ಜಿಲ್ಲಾ ಪ್ರವಾಸ ಮಾಡಿದ ಮೂವರು, ಉಸಿರಾಟದ ತೊಂದರೆ ಇರುವ ಇಬ್ಬರು, ಮಹಾರಾಷ್ಟ್ರದಿಂದ ಮರಳಿದ 10 ಮಂದಿ, ಗುಜರಾತ್‌ನಿಂದ ಬಂದ ಒಬ್ಬ ವ್ಯಕ್ತಿ ಇದ್ದಾರೆ. ನಗರದ ವಿವಿಧ ಪ್ರದೇಶಗಳ ನಿವಾಸಿಗಳಾದ 8 ಮಂದಿಗೆ ಯಾರಿಂದ ಸೋಂಕು ತಗುಲಿದೆ ಎಂಬುದೇ ಪತ್ತೆಯಾಗಿಲ್ಲ. ಉಳಿದಂತೆ 11 ಮಂದಿಗೆ ಸೋಂಕಿತರ ನೇರ ಸಂಪರ್ಕ ಹಾಗೂ ಕಂಟೇನ್ಮೆಂಟ್‌ ಝೋನ್‌ಗಳ ನಿವಾಸಿಗಳಿಗೆ ವೈರಾಣು ಅಂಟಿಕೊಂಡಿದೆ.

ಆಂದೋಲಾ ಸೀಲ್‌ಡೌನ್‌

ಜೇವರ್ಗಿ ಪಟ್ಟಣದ ಬಸ್ ಡಿಪೊ ಹತ್ತಿರದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಪತಿ, ಪತ್ನಿ ಸೇರಿದಂತೆ ಒಟ್ಟು 14 ಜನರಿಗೆ ಕೋವಿಡ್‌ ಸೋಂಕು ತಗುಲಿದೆ. ಇದರಲ್ಲಿ ಆಂದೋಲಾ ಗ್ರಾಮದ ಒಂದೇ ಕುಟುಂಬದ 12 ಮಂದಿ ಇದ್ದಾರೆ. ಹೀಗಾಗಿ, ಇಡೀ ಗ್ರಾಮವನ್ನು ಭಾನುವಾರ ಶೀಲ್‌ಡೌನ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಒಂದು ವಾರದ ಹಿಂದೆ ಮುಂಬೈ ಮೂಲದ ವ್ಯಕ್ತಿಯೊಬ್ಬರು ಆಂದೋಲಾ ಗ್ರಾಮಕ್ಕೆ ಬಂದಿದ್ದರು. ಅವರಿಗೆ ಕೊರೊನಾ ತಗುಲಿದ ಪರಿಣಾಮ ಕಲಬುರ್ಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಆಂದೋಲಾ ಗ್ರಾಮದ ಆಶಾ ಕಾರ್ಯಕರ್ತೆ (20) ಸೇರಿ 48 ವರ್ಷದ ಮಹಿಳೆ 17 ವರ್ಷದ ಯುವತಿ, 30 ವರ್ಷದ ಮಹಿಳೆ, 40 ವರ್ಷದ ಮಹಿಳೆ, 50 ವರ್ಷದ ಮಹಿಳೆ, 20 ವರ್ಷದ ಯುವಕ, 38 ವರ್ಷದ ಪುರುಷ, 12 ವರ್ಷದ ಬಾಲಕ, 10 ವರ್ಷದ ಬಾಲಕ, 27 ವರ್ಷದ ಪುರುಷ, 18 ವರ್ಷದ ಯುವಕ ಹಾಗೂ ಪಟ್ಟಣದ ಡಿಪೋ ಹತ್ತಿರದ ಕ್ವಾರಂಟೈನ್ ಕೇಂದ್ರದಲ್ಲಿರುವ ಪತಿ (51 ವರ್ಷ), ಪತ್ನಿಗೆ (41 ವರ್ಷ) ಸೋಂಕು ದೃಢಪಟ್ಟಿದೆ. ಅವರನ್ನು ಕೋವಿಡ್ ಕೇರ್‌ ಕೇಂದ್ರಕ್ಕೆ ದಾಖಲು ಮಾಡಲಾಗಿದೆ.

ಗ್ರಾಮದಲ್ಲಿ ಏಕಾಏಕಿ 12 ಜನರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿದೆ. ತಹಶೀಲ್ದಾರ್ ಸಿದರಾಯ ಭೋಸಗಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ, ಸಿಪಿಐ ರಮೇಶ ರೊಟ್ಟಿ, ಜೇವರ್ಗಿ ಪಿಎಸ್‍ಐ ಮಂಜುನಾಥ ಹೂಗಾರ, ನೆಲೋಗಿ ಪಿಎಸ್‍ಐ ಸಂಗಮೇಶ ಅಂಗಡಿ, ಯಡ್ರಾಮಿ ಪಿಎಸ್‍ಐ ಗಜಾನಂದ ಬಿರೆದಾರ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT