ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ವರ್ಷವಾದರೂ ಅಧಿಕಾರ ಸಿಕ್ಕಿಲ್ಲ!

ಒಂದು ಗ್ರಾಮದ ಜನರು ಚುನಾವಣೆ ಬಹಿಷ್ಕರಿಸಿದ್ದರಿಂದ ಉಂಟಾದ ಸಮಸ್ಯೆ
Last Updated 4 ಡಿಸೆಂಬರ್ 2020, 21:40 IST
ಅಕ್ಷರ ಗಾತ್ರ

ಚಿತ್ತಾಪುರ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನರಾಂಪುರಹಳ್ಳಿ ಗ್ರಾಮ ಪಂಚಾಯಿತಿಗೆ 2015ರಲ್ಲಿ ಏಳು ಜನ ಸದಸ್ಯರು ಆಯ್ಕೆಯಾಗಿದ್ದರೂ, ಐದು ಸ್ಥಾನ ಖಾಲಿ ಉಳಿದಿವೆ ಎಂಬ ಕಾರಣಕ್ಕೆ ಅವರಿಗೆ ಇನ್ನೂ ‘ಅಧಿಕಾರ’ ಸಿಕ್ಕಿಲ್ಲ.

ಹಿಂದಿನ ಚುನಾವಣೆಗೂ ಮುನ್ನ ಗ್ರಾಮ ಪಂಚಾಯಿತಿ ವಿಭಜನೆ ಮಾಡಲಾಗಿತ್ತು. ತಾಲ್ಲೂಕಿನ ರಾಂಪುರಹಳ್ಳಿ, ಶಾಂಪುರಹಳ್ಳಿ ಮತ್ತು ತರಕಸಪೇಠ ಗ್ರಾಮಗಳನ್ನು ಒಳಗೊಂಡು ಹೊಸದಾಗಿ 11 ಸದಸ್ಯ ಬಲದ ರಾಂಪುರಹಳ್ಳಿ ಗ್ರಾಮ ಪಂಚಾಯಿತಿಯನ್ನು ಸರ್ಕಾರ ರಚಿಸಿತ್ತು.

ರಾಂಪುರಹಳ್ಳಿಯ ನಾಲ್ಕು ಸ್ಥಾನ ಮತ್ತು ಶಾಂಪುರಹಳ್ಳಿ ಮೂರು ಸ್ಥಾನಗಳಿಗೆ ಚುನಾವಣೆ ಜರುಗಿ ಏಳು ಸದಸ್ಯರು ಚುನಾಯಿತರಾಗಿದ್ದರು.

ಆದರೆ, ತಮ್ಮ ಗ್ರಾಮಕ್ಕೆ ಆರು ಸದಸ್ಯ ಸ್ಥಾನ ಬೇಕು, ಗ್ರಾಮ ಪಂಚಾಯಿತಿ ಕೇಂದ್ರಸ್ಥಾನ ತಮ್ಮೂರಿಗೆ ಕೊಡಬೇಕು ಇಲ್ಲವೆ ಮೊದಲಿದ್ದಂತೆ
ಗ್ರಾಮವನ್ನು ಕೊಲ್ಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು ಎಂದು ತರಕಸಪೇಠ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದರಿಂದಆ ಗ್ರಾಮದ ನಾಲ್ಕು ಸ್ಥಾನಗಳಿಗೆ ಐದು ವರ್ಷಗಳಿಂದ ಚುನಾವಣೆಯೇ ನಡೆದಿಲ್ಲ.

ಎಲ್ಲ 11 ಸ್ಥಾನಗಳಿಗೆ ಆಯ್ಕೆ ನಡೆದಿಲ್ಲ ಎಂಬ ಕಾರಣಕ್ಕೆರಾಂಪುರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾ
ಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದಿಗೂ ನಡೆದಿಲ್ಲ. ಹೀಗಾಗಿ ಆಯ್ಕೆಯಾಗಿರುವ ಸದಸ್ಯರ ಅಧಿಕಾರ ಅವಧಿಯೇ ಆರಂಭವಾಗಿಲ್ಲ.

ಅಧಿಕಾರಿಗಳು ಮನವೊಲಿಸಲು ಯತ್ನಿಸಿದ್ದರೂ, ತರಕಸಪೇಠ ಗ್ರಾಮಸ್ಥರು ಒಗ್ಗಟ್ಟು ತೋರಿ ಈ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆ ಮತ್ತು ವಿಧಾನಸಭೆ ಚುನಾವಣೆ ಬಹಿಷ್ಕಾರ ಮಾಡಿದ್ದರು. ಆದರೆ, ಲೋಕಸಭೆ ಚುನಾವಣೆ
ಯಲ್ಲಿ ಮತದಾನ ಮಾಡಿದ್ದರು.

‘ತರಕಸಪೇಠ ಗ್ರಾಮಸ್ಥರ ಬಹಿಷ್ಕಾರ
ದಿಂದಾಗಿ ಅಧಿಕಾರದ ಅವಧಿ ಮುಗಿ
ಯದ ರಾಂಪುರಹಳ್ಳಿ ಪಂಚಾಯಿತಿ ಚುನಾವಣೆ ಕೈಬಿಡ
ಲಾಗಿದೆ’ ಎಂದು ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲಾಡಳಿತದ ನಿರ್ಲಕ್ಷ್ಯ: ‘ತರಕಸಪೇಠ ಗ್ರಾಮಸ್ಥರ ಬೇಡಿಕೆಯಿಂದ ಉಂಟಾದ ಸಮಸ್ಯೆ ಪರಿಹರಿಸುವಲ್ಲಿಜಿಲ್ಲಾಡಳಿತವು ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಒಂದು ಗ್ರಾಮದ ಸಮಸ್ಯೆಯಿಂದ ಎರಡು ಗ್ರಾಮಗಳಿಗೆ ಅನ್ಯಾಯ ಆಗುತ್ತಿದೆ’ ಎಂದು ಮುಖಂಡರೊಬ್ಬರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT