ಯಡ್ರಾಮಿ: ಪಟ್ಟಣದಲ್ಲಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸಿರುವ ಯಡ್ರಾಮಿ ಪೊಲೀಸರು 55 ಗ್ರಾಂ ಚಿನ್ನಾಭರ ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ ಸುಮಾರು ₹3.30 ಲಕ್ಷ ಎಂದು ಪೊಲೀಸರು ಅಂದಾಜಿಸಿದ್ದು, ಆರೋಪಿಯಿಂದ ₹1500 ನಗದು ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಲಬುರಗಿ ನಗರದ ಶಾಜಿಲಾನಿ ದರ್ಗಾ ಏರಿಯಾ ನಿವಾಸಿ ಮೊಹಮದ್ ರಫಿಕ್ ಅಲಿಯಾಸ್ ರಫಿಕ್ ಅಬ್ದುಲ್ ಘನಿ ಇನಾಮದಾರ ಬಂಧಿತ ಆರೋಪಿ. ಕಳೆದ ಕೆಲ ದಿನಗಳಿಂದ ಯಡ್ರಾಮಿ ಪಟ್ಟಣದಲ್ಲಿ ಮನೆ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದವು. ಇದನ್ನ ಗಮನಿಸಿದ ಪೊಲೀಸರು ಕಳ್ಳನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಇದರಿಂದ ಪಟ್ಟಣ ನಿವಾಸಿಗಳು ಇಟ್ಟುಸಿರು ಬಿಡುವಂತಾಗಿದೆ. ಕಾರ್ಯಾಚರಣೆಯಲ್ಲಿ ಪಿಎಸ್ಐ ವಿಶ್ವನಾಥರೆಡ್ಡಿ ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.