ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ರೇಷನ್‌ ಕಾರ್ಡ್‌ಗೆ ಆಧಾರ್‌ ದೃಢೀಕರಣ ಆರಂಭ

Last Updated 9 ಫೆಬ್ರುವರಿ 2021, 2:04 IST
ಅಕ್ಷರ ಗಾತ್ರ

ಕಲಬುರ್ಗಿ: ಕೋವಿಡ್–19 ಸೋಂಕು ತಡೆಗಟ್ಟುವ ಮುಂಜಾಗೃತಾ ಕ್ರಮವಾಗಿ ಪಡಿತರ ಚೀಟಿ ಸದಸ್ಯರ ಇ–ಕೆವೈಸಿ ಸಂಗ್ರಹಣಾ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಪುನಃ ಪಡಿತರ ಚೀಟಿ ಸದಸ್ಯರ ಸಂಗ್ರಹಣಾ ಕಾರ್ಯವನ್ನು ಪುನರಾರಂಬಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಕಟಣೆ ತಿಳಿಸಿದೆ.

ಪಡಿತರ ಚೀಟಿಗಳಿಗೆ ಈಗಾಗಲೇ ಹೊಂದಾಣಿಕೆಯಾಗಿರುವ ಆಧಾರ್‌ ಕಾರ್ಡ್‌ಗಳ ದೃಢೀಕರಣ (ಇ-ಕೆವೈಸಿ) ಪ್ರಕ್ರಿಯೆಯು ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಜಾರಿಯಲ್ಲಿದೆ. ಇ-ಕೆವೈಸಿ ಪ್ರಕ್ರಿಯೆಯು ಉಚಿತವಾಗಿ ನಡೆಯಲಿದ್ದು, ಪಡಿತರ ಚೀಟಿದಾರರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ.

ಇ-ಕೆವೈಸಿ ಮಾಡಿಸದವರಿಗೆ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲಾಗುವುದು. ಇ-ಕೆವೈಸಿ ಕಾರ್ಯಕ್ರಮವನ್ನು ಮಾರ್ಚ್‌ನಿಂದ ಪ್ರತಿ ತಿಂಗಳ 1 ರಿಂದ 10ನೇ ತಾರೀಖಿನವರೆಗೆ ನಿರ್ವಹಿಸಲು ನ್ಯಾಯಬೆಲೆ ಅಂಗಡಿಗಳಿಗೆ ತಿಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT