ಚಿಂಚೋಳಿ: ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ತಾಲ್ಲೂಕಿನಲ್ಲಿ ಹಸಿರೀಕರಣಕ್ಕಾಗಿ 2 ಲಕ್ಷ ಸಸಿಗಳು ನೆಡಲು ಸಿದ್ಧವಾಗಿವೆ.

ಪ್ರಾದೇಶಿಕ ಅರಣ್ಯ ವಲಯದ ಚಿಕ್ಕಲಿಂಗದಳ್ಳಿ ನರ್ಸರಿ, ವನ್ಯಜೀವಿ ಧಾಮದ ಅರಣ್ಯ ವಲಯದ ಲಿಂಗಾನಗರ ನರ್ಸರಿ, ಸಾಮಾಜಿಕ ಅರಣ್ಯ ವಲಯದ ಚಿಂಚೋಳಿ ಮತ್ತು ತಾಜಲಾಪುರ ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸಲಾಗಿದೆ.

ಮೂರು ಅರಣ್ಯ ವಲಯಗಳು ಚಿಂಚೋಳಿ, ಕಾಳಗಿ ಮತ್ತು ಕಮಲಾಪುರ ತಾಲ್ಲೂಕುಗಳಲ್ಲಿ ಹರಡಿಕೊಂಡಿವೆ. ವನ್ಯಜೀವಿ ಧಾಮ 13,488 ಹೆಕ್ಟೇರ್, ಸುಮಾರು 15 ಸಾವಿರ ಹೆಕ್ಟೇರ್ ಪ್ರಾದೇಶಿಕ ಅರಣ್ಯ ಮತ್ತು ಡೀಮ್ಡ್ ಅರಣ್ಯ 14 ಸಾವಿರ ಹೆಕ್ಟೇರ್ ಪ್ರದೇಶವಿರುವ ಅಂದಾಜಿದೆ.

ಪ್ರಾದೇಶಿಕ ಅರಣ್ಯ ವಲಯದ ಅಧಿಕಾರಿಗಳು ಅರಣ್ಯ ಇಲಾಖೆಯ ಮೇಲಧಿಕಾರಿಗಳ ಆದೇಶದ ಮೇರೆಗೆ ದೊಡ್ಡ ಗಾತ್ರದ 15,500 ಸಸಿಗಳನ್ನು, ರಾಜಮಂಡ್ರಿಯಿಂದ ಖರೀದಿಸಿ ತಂದಿದ್ದಾರೆ. ಇದಲ್ಲದೇ 1.04ಲಕ್ಷ ಸಸಿಗಳನ್ನು ಚಿಕ್ಕಲಿಂಗದಳ್ಳಿ ನರ್ಸರಿಯಲ್ಲಿ ಬೆಳೆಸಲಾಗಿದೆ.

‘ಇವುಗಳಲ್ಲಿ 15,500 ಸಸಿಗಳನ್ನು 50 ಕಿ.ಮೀ ಉದ್ದದ ರಸ್ತೆ ಬದಿಯಲ್ಲಿ ನೆಟ್ಟು ನೆಡುತೋಪು ಅಭಿವೃದ್ಧಿ ಪಡಿಸಲಾಗುವುದು. ಪಸ್ತಪುರ ಮೂರು, ರುಮ್ಮನಗೂಡ ಒಂದು ಬ್ಲಾಕ್ಗಳಲ್ಲಿ ಒಟ್ಟು 22 ಸಾವಿರ ಸಸಿಗಳು ನೆಡಲಾಗುವುದು. ನರನಾಳ ರಿಪ್ಪಿಂಗ್ ಬ್ಲಾಕ್ನಲ್ಲಿ 50 ಸಾವಿರ ಸಸಿಗಳನ್ನು ನೆಡಲಾಗುವುದು, 22 ಸಾವಿರ ಸಸಿಗಳನ್ನು ರೈತರಿಗೆ ₹ 3 ಮತ್ತು ₹6ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಜಗನ್ನಾಥ ಕೊರಳ್ಳಿ ತಿಳಿಸಿದರು.

‘ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಸುಮಾರು 45 ಸಾವಿರ ಸಸಿಗಳನ್ನು ಚಿಂಚೋಳಿ ಮತ್ತು ತಾಜಲಾಪುರ ನರ್ಸರಿಯಲ್ಲಿ ಬೆಳೆಸಲಾಗಿದ್ದು, ಇವುಗಳಲ್ಲಿ 25 ಸಾವಿರ ಸಸಿಗಳನ್ನು ವಿವಿಧೆಡೆ ನೆಡಲಾಗುವುದು. ರೈತರಿಗೆ ರಿಯಾಯಿತಿ ದರದಲ್ಲಿ 16 ಸಾವಿರ ಸಸಿಗಳನ್ನು ಮಾರಾಟ ಮಾಡಲಾಗುವುದು’ ಎಂದು ಉಪ ವಲಯ ಅರಣ್ಯಾಧಿಕಾರಿ ಗುಂಡಪ್ಪ ಮಾಹಿತಿ ನೀಡಿದರು.

ವನ್ಯಜೀವಿ ಧಾಮದ ವಲಯದಲ್ಲಿ ವಿವಿಧೆಡೆ 31,800 ಸಸಿಗಳನ್ನು ನೆಡಲಾಗುವುದು. 5,000 ಸಸಿಗಳನ್ನು ರೈತರಿಗೆ ರಿಯಾಯಿತಿ ಮಾರಾಟ ಮಾಡಲು ಕಾಯ್ದಿರಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಭಾಗಪ್ಪಗೌಡ ತಿಳಿಸಿದರು.

ಮೂರು ಅರಣ್ಯ ವಲಯಗಳಲ್ಲಿ ಅರಳೆ, ಬೇವು, ಚಳ್ಳಿ(ಸುಂಬಡ), ಹೊಂಗೆ, ಬಸರಿ, ನೇರಳೆ, ಸಿಹಿ ಹುಣಸೆ, ತಬಸ್ಸಿ, ಹಳದಿ ಜ್ವಾಲೆ (ಬೆಟ್ಟದ ಹುಣಸೆ) ಹೂ, ಶಿವಣಿ, ಚರ್ರಿ, ಮಾವು, ಹತ್ತಿ, ಬೊರ್ಗಾ, ಬಸವನ ಪಾದ, ಸಿಸ್ಸು ಸಸಿಗಳನ್ನು ವಿವಿಧೆಡೆ ನೆಡಲು ಬಳಸಿದರೆ ರೈತರಿಗೆ ಸಾಗವಾನಿ, ಶ್ರೀಗಂಧ, ನೆಲ್ಲಿ, ಸೀತಾಫಲ, ಬಿದಿರು, ಹೆಬ್ಬೇವು, ಮಹಾಗನಿ ಸಸಿಗಳು ವಿತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ರಾಜಮಂಡ್ರಿಯಿಂದ ಖರೀದಿಸಿ ತಂದ ಸಸಿಗಳು 15,000 | ಇಲಾಖೆ ನರ್ಸರಿಯಲ್ಲಿ ಬೆಳೆಸಿದ ಸಸಿಗಳು 1.5ಲಕ್ಷ | ಮೂರು ಅರಣ್ಯ ವಲಯಗಳಿಂದ ಹಸಿರೀಕರಣಕ್ಕೆ ಒತ್ತು

ರಸ್ತೆ ಬದಿ ನೆಡು ತೋಪುಗಳಲ್ಲಿ ಸಸಿಗಳನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ವಾರದಿಂದ ಸಸಿ ನೆಡುವ ಕಾರ್ಯ ಕೈಗೊಳ್ಳಲು ಉದ್ದೇಶಿಸಲಾಗಿದೆ
ಜಗನ್ನಾಥ ಕೊರಳ್ಳಿ ವಲಯ ಅರಣ್ಯಾಧಿಕಾರಿ ಪ್ರಾದೇಶಿಕ ಅರಣ್ಯ ಚಿಂಚೋಳಿ

ನರನಾಳ ಸುತ್ತಲೂ ಅರಣ್ಯ ಪ್ರದೇಶ ಹರಡಿಕೊಂಡಿದ್ದು ಅರಣ್ಯ ಅಭಿವೃದ್ಧಿಗೆ ಅವಕಾಶವಿದೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಸಸಿಗಳ ನೆಟ್ಟರೆ ಹಸಿರು ಹೆಚ್ಚಾಗಲಿದೆ
ಲಕ್ಷ್ಮಿನರಸಿಂಹರೆಡ್ಡಿ ಮುಖಂಡ ನರನಾಳ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.