ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೇವರ್ಗಿ(ಬಿ): ನಿರ್ಲಕ್ಷಕ್ಕೆ ಒಳಗಾದ ಹಿರಿಯ ಪ್ರಾಥಮಿಕ ಶಾಲೆ

Published : 29 ಆಗಸ್ಟ್ 2024, 6:41 IST
Last Updated : 29 ಆಗಸ್ಟ್ 2024, 6:41 IST
ಫಾಲೋ ಮಾಡಿ
Comments

ಅಫಜಲಪುರ: ಮಹಾರಾಷ್ಟ್ರದ ಗಡಿಭಾಗದ ತಾಲ್ಲೂಕಿನ ಜೇವರ್ಗಿ(ಬಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ಕೋಣೆಗಳು ಸೋರುತ್ತವೆ. ಕೋಣೆಗಳು ಬಿರುಕು ಬಿಟ್ಟಿದ್ದು ಮಕ್ಕಳು, ಶಿಕ್ಷಕರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 189 ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರು ಸೇರಿ 6 ಜನ ಶಿಕ್ಷಕರಿದ್ದಾರೆ.

1964ರಲ್ಲಿ ಆಗಿನ ಮೈಸೂರು ರಾಜ್ಯದ ಶಿಕ್ಷಣ ಮಂತ್ರಿ ಅಣ್ಣಾರಾವ್ ಗಣಮುಕಿಯವರು ಈ ಶಾಲೆಯ ಕಟ್ಟಡ  ಉದ್ಘಾಟಿಸಿದ್ದರು. ಅಲ್ಲಿಂದ ಈವರೆಗೂ ಶಾಲೆಯ ಸುಧಾರಣೆ ಯಾರು ಮುಂದಾಗಿಲ್ಲ.

1964ರಲ್ಲಿ ನಿರ್ಮಾಣವಾದ ಕೋಣೆಗಳು ಅಲ್ಪಸಲ್ಪ ಸರಿಯಾಗಿವೆ. ಆದರೆ ಇತ್ತೀಚಿಗೆ ನಿರ್ಮಾಣವಾದ ಕೋಣೆಗಳು ಬಿರುಕು ಬಿಟ್ಟು ಸೋರುತಿವೆ. ಕುಡಿಯುವ ನೀರು, ಕಾಂಪೌಂಡ್ ಗೋಡೆ, ಆಟದ ಮೈದಾನವಿಲ್ಲ.

ಪ್ರಜಾವಾಣಿಯೊಂದಿಗೆ ಮಾತನಾಡಿದ ಮುಖ್ಯಶಿಕ್ಷಕ ಅಣ್ಣಾರಾಯ ಪಾಟೀಲ ,‘ಒಟ್ಟು 11 ಕೋಣೆಗಳಿದ್ದು 2–3 ಮಾತ್ರ ಅಲ್ಪಸಲ್ಪ ಚೆನ್ನಾಗಿವೆ. ಉಳಿದೆಲ್ಲ ಕೋಣೆಗಳು ಸೋರುತ್ತವೆ, ಅಲ್ಲಲ್ಲಿ ಬಿರುಕು ಬಿಟ್ಟಿವೆ. ಪಿಡಿಒ, ಕ್ಷೇತ್ರಧಿಕಾರಿಗಳಿಗೆ ಮತ್ತು ತಾಲ್ಲೂಕು ಪಂಚಾಯಿತಿಗೆ ಶಾಲಾ ಕೋಣೆಗಳ ದುರಸ್ತಿಗಾಗಿ ಮತ್ತು ಸಂಪೂರ್ಣ ಹಾಳಾಗಿರುವ ಕೋಣೆಗಳನ್ನ ನೆಲಸಮ ಮಾಡಿ ಹೊಸ ಕೋಣೆಗಳ ನಿರ್ಮಾಣ ಮಾಡಲು ಮನವಿ ಸಲ್ಲಿಸಿದ್ದೇನೆ. ಇಲ್ಲಿವರೆಗೆ ಯಾರೂ ಕ್ರಮಜರಿಸಿಲ್ಲ. ಮಳೆ ಬಂದರೆ ಜೀವ ಕೈಯಲ್ಲಿ ಹಿಡಿದು ಮಕ್ಕಳಿಗೆ ಪಾಠ ಮಾಡುವ ಪರಿಸ್ಥಿತಿ ಬಂದಿದೆ’ ಎಂದು ಅಳಲು ತೋಡಿಕೊಂಡರು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶಿವರುದ್ರ ಜೋಗದೆ, ಉಪಾಧ್ಯಕ್ಷೆ ಬಂಧನಾ ತಳವಾರ ಮಾಹಿತಿ ನೀಡಿ, ‘ಶಾಲೆಯ ಎಲ್ಲ ಕೋಣೆಗಳು ಸೋರುವಿದರಿಂದ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ. ಹೊಸ ಕಟ್ಟಡ ನಿರ್ಮಾಣ ಮಾಡಬೇಕು. ಈ ಬಗ್ಗೆ ಹಲವು ಸಲ ಸರ್ಕಾರಕ್ಕೆ ವರದಿ ಮಾಡಿದ್ದೇವೆ. ಆದರೂ ಕ್ರಮ ತೆಗೆದುಕೊಂಡಿಲ್ಲ. ಇಲಾಖೆಯವರು ಮತ್ತು ಜನಪ್ರತಿನಿಧಿಗಳು ಹೊಸದಾಗಿ ಕಟ್ಟಡ ನಿರ್ಮಾಣ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

ಶಾಲೆಯಲ್ಲಿ ಮಕ್ಕಳಿಗಾಗಿ ಕೊಳವೆಬಾವಿ ಕೊರೆಯಲಾಗಿದ್ದು ನೀರು ಚೆನ್ನಾಗಿದೆ. ಆದರೆ ಪಂಪ್‌ಸೆಟ್‌ ಕಳುವು ಮಾಡಿದ್ದಾರೆ. ಸದ್ಯಕ್ಕೆ ಮಕ್ಕಳು ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಆಗುವ ಕಲುಷಿತ ನೀರನ್ನೇ ಕುಡಿಯುತ್ತಿದ್ದಾರೆ. ಅದೂ ನಿತ್ಯ ಬರುವುದಿಲ್ಲ. ಹೊಸ ಶೌಚಾಲಯ ನಿರ್ಮಾಣ ಕಾಮಗಾರಿಯೂ ಅರ್ಧಕ್ಕೆ ನಿಂತಿದ್ದು ಮಕ್ಕಳು ಮೂಲಸೌಲಬ್ಯಗಳಿಂದ ವಂಚಿತರಾಗಿದ್ದಾರೆ.

ಅಫಜಲಪುರ ತಾಲೂಕಿನ ಜೇವರ್ಗಿ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಘಾಟನೆ ನಾಮಫಲಕ
ಅಫಜಲಪುರ ತಾಲೂಕಿನ ಜೇವರ್ಗಿ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಘಾಟನೆ ನಾಮಫಲಕ
ಜೇವರ್ಗಿ (ಬಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ಕೋಣೆಗಳು ಅಪಾಯದ ಸ್ಥಿತಿಯಲ್ಲಿವೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.
–ಅಣ್ಣಾರಾಯ ಪಾಟೀಲ, ಮುಖ್ಯಶಿಕ್ಷಕ
ಮಳೆ ಬಂದರೆ ನಮಗೆ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ. ಶೌಚಾಲಯ ಮತ್ತು ಕುಡಿಯುವ ನೀರಿಗಾಗಿ ಕಷ್ಟಪಡುತ್ತಿದ್ದೇವೆ.
–ಅತಿಯಾ, ವಿದ್ಯಾರ್ಥಿನಿ
ಮಳೆ ಬಂದರೆ ನಾವು ಶಾಲೆಗೆ ಹೋಗುವುದೇ ಇಲ್ಲ. ಹೀಗಾಗಿ ಸರ್ಕಾರ ಕೋಣೆಗಳನ್ನ ದುರಸ್ತಿ ಮಾಡಬೇಕು. ನಮ್ಮ ವಿದ್ಯಾಭ್ಯಾಸ ಕುಂಠಿತವಾಗುತ್ತಿದೆ.
–ಸಾಗರ ಬಾಸಗಿ, ವಿದ್ಯಾರ್ಥಿ
ಜೇವರ್ಗಿ(ಬಿ) ಸರ್ಕಾರಿ ಪ್ರಾಥಮಿಕ ಶಾಲೆಯ ಎಲ್ಲಾ ಕೋಣೆಗಳು ಸೋರುತ್ತಿರುವ ಬಗ್ಗೆ ಮಾಹಿತಿ ಇದೆ. ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ.
– ಎಂ.ವೈ.ಪಾಟೀಲ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT