ಆಳಂದ: ತಾಲ್ಲೂಕಿನ ರುದ್ರವಾಡಿ ಗ್ರಾಮದಲ್ಲಿನ ಬಸವಣ್ಣನ ಪುತ್ಥಳಿಯನ್ನು ಪೊಲೀಸರು ತೆರವುಗೊಳಿಸಿರುವುದನ್ನು ಖಂಡಿಸಿ ಗ್ರಾಮಸ್ಥರು ಹಾಗೂ ವಿವಿಧ ಬಸವಪರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ತಾಲ್ಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.

ಜಿ.ಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ ಮಾತನಾಡಿ, ‘ರುದ್ರವಾಡಿ ಗ್ರಾಮದಲ್ಲಿ ಸ್ಥಾಪಿಸಲಾದ ಬಸವಣ್ಣನ ಪುತ್ಥಳಿಯನ್ನು ಅಧಿಕಾರಿಗಳು ಯಾರದೋ ಒತ್ತಡಕ್ಕೆ ಮಣಿದು ತೆರವುಗೊಳಿಸಿದ್ದಾರೆ. ಇದು ವಿಶ್ವಗುರು ಬಸವಣ್ಣನವರಿಗೆ ಮಾಡಿದ ಅವಮಾನ. ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಮೂರ್ತಿ ಸ್ಥಾಪನೆಗೆ ಅವಕಾಶ ಮಾಡಬೇಕು’ ಎಂದರು.

‘ಬಸವಣ್ಣನವರ ಪುತ್ಥಳಿಯು ತೆರವುಗೊಳಿಸಿದ ಕ್ರಮ ಖಂಡನೀಯ. ತಾಲ್ಲೂಕು ಮಟ್ಟದ ಅಧಿಕಾರಿಗಳು, ಪೊಲೀಸರು ತಕ್ಷಣ ವಿವಾದ ಬಗೆಹರಿಸಬೇಕು. ಬಸವಣ್ಣನವರ ಪುತ್ಥಳಿಯು ಸೂಕ್ತ ಜಾಗದಲ್ಲಿ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಹಶೀಲ್ದಾರ್ ಅಣ್ಣರಾವ ಪಾಟೀಲ ಅವರು ಮನವಿ ಸ್ವೀಕರಿಸಿ ಮಾತನಾಡಿದ ಅವರು, ಸರ್ವೆ ಕಾರ್ಯ ಕೈಗೊಳ್ಳಲು ಕಂದಾಯ ಇಲಾಖೆಗೆ ಸೂಚಿಸಲಾಗಿದೆ, ವರದಿ ಸಲ್ಲಿಸಿದ ಬಳಿಕ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ತಾತ್ಕಾಲಿಕವಾಗಿ ಗ್ರಾಮದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗಲು ತಿಳಿಸಿದರು.

ಪುರಸಭೆ ಸದಸ್ಯ ಶಿವಪುತ್ರ ನಡಗೇರಿ, ಲಿಂಗರಾಜ ಪಾಟೀಲ, ಶಿವಕುಮಾರ ಹೀರಾ, ಮಹೇಶ ಗೌಳಿ ಮಾತನಾಡಿದರು. ಪ್ರಮುಖರಾದ ಶ್ರೀಶೈಲ ಖಜೂರಿ, ಸಿದ್ದು ಹಿರೋಳ್ಳಿ, ಮಹೇಶ ಕೊರಳ್ಳಿ, ಶ್ರೀನಾಥ ಮುಲಗೆ, ವಿಜಯಕುಮಾರ ಸಾಹು, ಶರಣು ಚಿಚಕೋಟೆ, ಮಲ್ಲಿಕಾರ್ಜುನ ಮುಲಗೆ, ಶರಣಗೌಡ ಪಾಟೀಲ, ಸೇರಿದಂತೆ ಹಲವರು ಭಾಗವಹಿಸಿದ್ದರು.

ಘಟನೆ ವಿವರ: ರುದ್ರವಾಡಿ ಗ್ರಾಮದಲ್ಲಿ ಬಸವೇಶ್ವರ ತರುಣ ಸಂಘದಿಂದ ಆ. 11ರಂದು ಧ್ವಜಕಟ್ಟಿ ಸ್ಥಳದಲ್ಲಿ ಬಸವಣ್ಣನ ಪುತ್ಥಳಿ ಸ್ಥಾಪನೆ ಮಾಡಲಾಗಿತ್ತು. ಇದಾದ ಬೆನ್ನಲ್ಲೆ ಗ್ರಾಮದ ಅಲ್ಪಸಂಖ್ಯಾತ ಸಮಾಜದವರು ತಹಶೀಲ್ದಾರ್ ಅಣ್ಣರಾವ ಪಾಟೀಲ ಅವರಿಗೆ ದೂರು ಸಲ್ಲಿಸಿ ತಮ್ಮ ಸಮಾಜಕ್ಕೆ ಸೇರಿದ ಜಾಗದಲ್ಲಿ ಬಸವಣ್ಣನ ಪುತ್ಥಳಿ ಸ್ಥಾಪಿಸಲಾಗಿದೆ, ಇದನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿದ್ದರು.

ಈ ಸಂಬಂಧ ತಹಶೀಲ್ದಾರ್ ಅಣ್ಣರಾವ ಪಾಟೀಲ, ಸಿಪಿಐ ಪ್ರಕಾಶ ಯಾತನೂರು, ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಬಸವಣ್ಣನ ಪುತ್ಥಳಿಯು ಸ್ಥಾಪಿಸಿದ ಸ್ಥಳದ ಸರ್ವೆ ಕಾರ್ಯ ಕೈಗೊಳ್ಳುವರೆಗೂ ಯಥಾಸ್ಥಿತಿ ಕಾಯಬೇಕು ಎಂದು ಸೂಚಿಸಿದ್ದರು. ತಾತ್ಕಾಲಿಕವಾಗಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬಸವಣ್ಣನ ಪುತ್ಥಳಿ ಸ್ಥಳಾಂತರಿಸಲಾಗಿತ್ತು. ಈ ಘಟನೆ ನಡೆದ ಬೆನ್ನಲ್ಲೆ ಗ್ರಾಮಸ್ಥರು ಬಸವಣ್ಣ ಪುತ್ಥಳಿಯ ತೆರವು ಕಾರ್ಯ ಕೈಗೊಂಡ ತಾಲ್ಲೂಕು ಅಧಿಕಾರಿಗಳ ಹಾಗೂ ಪೋಲಿಸರ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.