ಆಳಂದ: ಪಟ್ಟಣದಲ್ಲಿ ಮಹಾರಾಷ್ಟ್ರದ ನಾಣೇಜಧಾಮದ ನರೇಂದ್ರಾಚಾರ್ಯ ಮಹಾರಾಜರ ಪಾದುಕೆ ದರ್ಶನ ಕಾರ್ಯ ಕ್ರಮವು ಅದ್ದೂರಿಯಾಗಿ ಜರುಗಿತು.

ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯದ ವಿವಿಧೆಡೆಯಿಂದ ಭಕ್ತರು ಈ ಪಾದುಕೆ ದರ್ಶನದಲ್ಲಿ ಸಮ್ಮೀಲನಗೊಂಡಿರುವದು ವಿಶೇಷವಾಗಿತ್ತು.

ಪಟ್ಟಣದ ಶ್ರೀರಾಮ ಮಾರುಕಟ್ಟೆ ಯಿಂದ ಬಸ್ ನಿಲ್ದಾಣ ಮಾರ್ಗವಾಗಿ ಎಸ್‌ಆರ್‌ಜಿ ಆಂಗ್ಲಮಾಧ್ಯಮ ಶಾಲೆ ಆವರಣದವರೆಗೂ ಭವ್ಯ ಮೆರವಣಿಗೆ ಸಾಗಿತು.

ಮಹಿಳೆಯರು ನೃತ್ಯ, ಹರಿಭಜನೆ, ಡೊಳ್ಳು ಕುಣಿತ ಮತ್ತಿತರ ವಾದ್ಯಗಳ ಸಡಗರವು ಮೆರವಣಿಗೆಗೆ ಕಳೆ ಕಟ್ಟಿತು. ಸಾವಿರಾರೂ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಪಾದುಕೆ ದರ್ಶನ ಕೈಗೊಂಡರು.

ನಾಣೇಜಧಾಮದ ರಾಣಾ ಬರೇ ಮಾತನಾಡಿ,‘ಭಕ್ತಿಯಿಂದ ಪರೋಪ ಕಾರ, ಮಾನವೀಯತೆ ಹಾಗೂ ಸದ್ಗು ಣಗಳು ಅರಳುವವು, ಹೀಗಾಗಿ ನಮ್ಮ ಮನಸ್ಸು ಹಾಗೂ ಇಂದ್ರೀಯಗಳನ್ನು ಅಧ್ಯಾತ್ಮದತ್ತ ಒಲವು ಬೆಳೆಸಿಕೊಳ್ಳಬೇಕು ಎಂದರು.

ಅಂಧಶ್ರದ್ಧೆ ಮನುಷ್ಯನನ್ನು ಅಜ್ಞಾನ ದತ್ತ ಕರೆದುಕೊಂಡು ಹೋಗಲಿದೆ, ಅಧ್ಯಾತ್ಮ, ಯೋಗ, ಜ್ಞಾನಗಳು ಸನ್ಮಾರ್ಗದತ್ತ ಕರೆದುಕೊಂಡು ಹೋಗಲಿವೆ, ನರೇಂದ್ರಾಚಾರ್ಯ ಸ್ವಾಮೀಜಿ ಅವರ ಅಧ್ಯಾತ್ಮ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.

ಉದಗೀರ್‌ನ ಸುಶೀಲ ಪಾಟೀಲ, ಕಲಬುರಗಿಯ ವಿಠಲ ಕಾಳೆ, ನಾಗನಾಥ ಏಟೆ, ಅಂಬಾದಾಸ ಸಿಂಧೆ, ತಾನಾಜಿ ಪವಾರ, ಹರ್ಷಾನಂದ ಗುತ್ತೇದಾರ, ದತ್ತಾ ಬಾಬರೆ, ಪಂಡಿತ ಶೇರಿಕಾರ, ರಾಹುಲ ಚಿಟ್ಟೆಕರ್, ನರೇಶ ಬೋಸಲೆ, ಸೋಮನಾಥ ನಾಗಬುಜಂಗೆ, ಮನೋಹರ ಮಾನೆ, ನಂದಕುಮಾರ ಹಂಚಾಟೆ ಇದ್ದರು.

ಕಲಬುರಗಿ, ಆಳಂದ, ಕಮಲಾ ಪುರ, ಉಮರ್ಗಾ, ಸೋಲಾಪುರ, ನಾಂದೇಡ ಮತ್ತಿತರ ತಾಲ್ಲೂಕಿನಿಂದ ಭಕ್ತರು ಪಾದುಕೆ ದರ್ಶನದಲ್ಲಿ ಪಾಲ್ಗೊಂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.