ಕಲಬುರಗಿ: ‘ಗುರುಬಲದಿಂದ ಸರ್ವ ಕಾರ್ಯಗಳು ಸಿದ್ಧಿಯಾಗುತ್ತವೆ’ ಎಂದು ಕಡಗಂಚಿ ಸಂಸ್ಥಾನ ಕಟ್ಟಿಮಠದ ವೀರಭದ್ರ ಶಿವಾಚಾರ್ಯ ಹೇಳಿದರು.

ನಗರದ ಶಹಾಬಜಾರ್ನ ಶೇಖ್ ರೋಜಾದಲ್ಲಿರುವ ಸೊಸನಗೇರಿ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿದ ವೀರಸೋಮೇಶ್ವರ ಸಾಹಿತ್ಯ ಸಾಂಸ್ಕೃತಿಕ ಸೇವಾ ಸಂಘದ 12ನೇ ವಾರ್ಷಿಕೋತ್ಸವ ಹಾಗೂ 2025ನೇ ಸಾಲಿನ ವೀರಸೋಮೇಶ್ವರ ಸಂಪದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಹರ ಮುನಿದರೂ ಗುರು ಕಾಯುವನು. ಸಿದ್ರಾಮಪ್ಪ ಆಲಗೂಡಕರ ಕೈಗೊಂಡಿರುವ ಆಧ್ಯಾತ್ಮಿಕ ಕಾರ್ಯಕ್ರಮಗಳ ಹಿಂದೆ ಗುರುಬಲವಿದೆ. ಅವರ ಎಲ್ಲ ಕೆಲಸಗಳು ಯಶಸ್ವಿಯಾಗಲಿ’ ಎಂದರು.

ವಕೀಲ ಬಾಬುರಾವ್ ಜಾಧವ, ಪತ್ರಕರ್ತ ಬಸವರಾಜ್ ಚಿನಿವಾರ ಮಾತನಾಡಿದರು. ಜಗದ್ಗುರು ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆಯ ಅಧ್ಯಕ್ಷ ಅಮೃತಪ್ಪ ಮಲಕಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗುರುಪಾದಪ್ಪ ಕಿಣಗಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬುರಾವ್ ಕೋಬಾಳ, ಗೌರಿಶಂಕರ ನವಣಿ, ಪತ್ರಕರ್ತ ಚಂದ್ರಕಾಂತ್ ಹಾವನೂರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಅಮೃತ ಎಚ್. ಡಿಗ್ಗಿ, ರೇವಣಯ್ಯ ಸ್ವಾಮಿ ಸುಂಟನೂರ, ಕಲ್ಯಾಣರಾವ್ ಘಾಣೂರೆ, ನಾಗರಾಜ್ ಗೋಗಿ, ಕೃಷ್ಣಯ್ಯ ಮಡಿಕಟ್ಟು, ಸ್ವಾತಿ ಬಿ.ಕೋಬಾಳ ಹಾಗೂ ರಾಜೇಂದ್ರ ಕಿರಣಗಿ ಅವರಿಗೆ 2025ನೇ ಸಾಲಿನ ‘ವೀರಸೋಮೇಶ್ವರ ಸಂಪದ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ಸ್ಮರಣಿಕೆ, ಶಾಲು ಹಾಗೂ ಪುಷ್ಪ ಮಾಲೆ ಒಳಗೊಂಡಿತ್ತು.

ವಕೀಲ ಹಣಮಂತರಾವ್ ಅಟ್ಟೂರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಲಗೂಡಕರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾತಿ ಬಿ. ಕೋಬಾಳ, ಬಾಬುರಾವ ಕೋಬಾಳ ಮತ್ತಿತರ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.