ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಶಾಸಕ ಯತ್ನಾಳ್ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಮುಚ್ಚುವಂತೆ ನಿರ್ದೇಶನ

Published 27 ಜನವರಿ 2024, 10:27 IST
Last Updated 27 ಜನವರಿ 2024, 10:27 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರಗಿ ಜಿಲ್ಲೆ): ಜಿಲ್ಲೆಯ ಚಿಂಚೋಳಿಯಲ್ಲಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಒಡೆತನದ ಸಿದ್ಧಸಿರಿ ಎಥೆನಾಲ್ ಹಾಗೂ ಪವರ್ ಘಟಕವು ನಿಯಮಾವಳಿ ಉಲ್ಲಂಘಿಸಿರುವುದರಿಂದ ಕಾರ್ಖಾನೆ ಮುಚ್ಚುವಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಕಾರ್ಖಾನೆಗೆ ಭೇಟಿ ನೀಡಿದ ಸೇಡಂ ಉಪವಿಭಾಗಾಧಿಕಾರಿ ಆಶಪ್ಪ ಪುಜಾರಿ ಕಾರ್ಖಾನೆ ಮುಚ್ಚುವಂತೆ ಸೂಚಿಸಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶಾಂತಗೌಡ ಗುಣಕಿ, ಚಿಂಚೋಳಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಸಹಾಯಕ ಮಾಲಿನ್ಯ ನಿಯಂತ್ರಣಾಧಿಕಾರಿ ಶಾರದಾ ಅವರೊಂದಿಗೆ ಕಾರ್ಖಾನೆಗೆ ಧಾವಿಸಿದ ಆಶಪ್ಪ ಅವರು ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರೊಂದಿಗೆ ಸಭೆ ನಡೆಸಿದರು‌.

ಕಂಪನಿಗೆ ಹಂಚಿಕೆಯಾದ ಗ್ರಾಮಗಳ ವಿವರ, ಕಬ್ಬು‌ ನುರಿಸಿದ ವಿವರ ಹಾಗೂ ನೀರು ಬಳಕೆಗೆ ಪಡೆದ ಅನುಮತಿ ಮತ್ತು ಸೂಕ್ತ ಪ್ರಾಧಿಕಾರದಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯದ ಬಗ್ಗೆ ಹಾಗೂ ಸ್ಥಳೀಯ ಸಂಸ್ಥೆಗೆ ತೆರಿಗೆ ಭರಿಸದೇ ಇರುವುದು ಮತ್ತು ಕಂಪನಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಏಕೆ ಪಡೆದಿಲ್ಲ, ಕಂಪೆನಿಗೆ ಎಫ್ ಆರ್ ಪಿ ನಿಗದಿಯಾಗಿಲ್ಲ ಏಕೆ ಎಂದು ಪ್ರಶ್ನಿಸಿದರು.

ಬೇರೆ ಕಂಪನಿಗಳಿಗೆ ಹಂಚಿಕೆಯಾದ ಗ್ರಾಮಗಳ ರೈತರ ಕಬ್ಬು ಖರೀದಿಸುತ್ತಿರುವ ಕುರಿತು ಕಂಪನಿ ವಿರುದ್ಧ ದೂರುಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದರು.

ಕಂಪನಿ ನ.28ರಿಂದ ಇಲ್ಲಿಯವರೆಗೆ 2,46,477 ಟನ್ ಕಬ್ಬು ನುರಿಸಲಾಗಿದೆ ಎಂದು ಕಂಪನಿಯ ಹಿರಿಯ ಅಧಿಕಾರಿ ಶಿವಕುಮಾರ ಹೊಸಮನಿ ತಿಳಿಸಿದರು.

ಕಂಪನಿಯ ಯಾರ್ಡ್ ನಲ್ಲಿ 1600 ಟನ್ ಕಬ್ಬಿದೆ. ಇದರ ಜತೆಗೆ ರೈತರ ಹೊಲಗಳಲ್ಲಿ ಕತ್ತರಿಸಿದ ಕಬ್ಬು ಬೇರೆ ಕಾರ್ಖಾನೆಗಳಿಗೆ ಸಾಗಿಸಲು ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸೂಚಿಸಿದರು. ನಾವು ಸರ್ಕಾರದ ಆದೇಶಕ್ಕೆ ಬದ್ಧರಿದ್ದೇವೆ. ಕಾರ್ಖಾನೆ ಬಂದ್ ಮಾಡುತ್ತೇವೆ ಎಂದು ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT