ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಸಮಾನತೆಗೆ ಅಂಬೇಡ್ಕರ್ ಕೊಡುಗೆ ಅಪಾರ: ಶಾಸಕ ಡಾ. ಅಜಯಸಿಂಗ್

Last Updated 15 ಏಪ್ರಿಲ್ 2022, 3:47 IST
ಅಕ್ಷರ ಗಾತ್ರ

ಜೇವರ್ಗಿ: ‘ಸಾಮಾಜಿಕ ಸಮಾನತೆಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಅವರು ತಮ್ಮ ಜೀವನದುದ್ದಕ್ಕೂ ಶೋಷಿತರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಜನಾಂಗಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಲು ಅವಿರತವಾಗಿ ಶ್ರಮಿಸಿದ್ದಾರೆ’ ಎಂದು ಶಾಸಕ ಡಾ. ಅಜಯಸಿಂಗ್ಹೇಳಿದರು.

ತಾಲ್ಲೂಕು ಆಡಳಿತ ವತಿಯಿಂದ ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 131ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಹಿತಿ ಚಂದ್ರಶೇಖರ ಕಟ್ಟಿಮನಿ ಉಪನ್ಯಾಸ ನೀಡಿದರು.

ತಹಶೀಲ್ದಾರ್ ವಿನಯಕುಮಾರ ಪಾಟೀಲ್, ಜಯಂತ್ಯುತ್ಸವ ಸಮಿತಿ ಅಧ್ಯಕ್ಷೆ ಶಿವುಬಾಯಿ ಕೊಂಬಿನ್, ಪುರಸಭೆ ಅಧ್ಯಕ್ಷೆ ಶರಣಮ್ಮ ಸಾಯಬಣ್ಣ ತಳವಾರ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಮದಾರ, ಗ್ರೇಡ್- 2 ತಹಶೀಲ್ದಾರ್ ರಮೇಶಬಾಬು ಹಾಲು, ಸಿಪಿಐ ಶಿವಪ್ರಸಾದ ಮಠದ, ಅಶೋಕ ನಾಯಕ, ತಾ.ಪಂ. ಇಒ ಅಬ್ದುಲನಬಿ, ಪುರಸಭೆ ಮುಖ್ಯಾಧಿಕಾರಿ ಶರಣಯ್ಯ ಹಿರೇಮಠ, ಡಿ.ಬಿ.ಪಾಟೀಲ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ್, ಶಾಂತಪ್ಪ ಕೂಡಲಗಿ, ಭೀಮರಾಯ ನಗನೂರ, ಮರೆಪ್ಪ ಬಡಿಗೇರ, ಚಂದ್ರಶೇಖರ ಹರನಾಳ, ಶರಣಬಸವ ಕಲ್ಲಾ, ಸಿದ್ದಪ್ಪ ಆಲೂರ, ಬಸಣ್ಣ ಸರಕಾರ ಕೋಳಕೂರ, ಮಲ್ಲಿಕಾರ್ಜುನ ಕೆಲ್ಲೂರ, ಮಲ್ಲಣ್ಣ ಕೊಡಚಿ, ಬೆಣ್ಣೆಪ್ಪ ಕೊಂಬಿನ್, ರವಿ ಕುಳಗೇರಿ, ಸಂಗಮೇಶ ಕೊಂಬಿನ್, ಚಿದಾನಂದ ಬಾವಿಮನಿ, ಸುನೀಲ ಚನ್ನೂರ, ರಾಘವೇಂದ್ರ ಹವಾಲ್ದಾರ, ಶ್ರೀಹರಿ ಕರಕಳ್ಳಿ, ಶ್ರೀಮಂತ ದನ್ನಕರ್, ದವಲಪ್ಪ ಮದನ, ವಿಶ್ವರಾಧ್ಯ ಗಂವ್ಹಾರ, ಮಹೇಶ ಕೋಕಿಲೆ, ವಿಶ್ವರಾಧ್ಯ ಆಲೂರ, ದೇವು ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT