ಶನಿವಾರ, ಮಾರ್ಚ್ 25, 2023
22 °C

ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಇಲ್ಲಿನ ಶರಣಬಸವೇಶ್ವರ ವಸತಿ ಪಬ್ಲಿಕ್‌ ಶಾಲೆಯಲ್ಲಿ ಸೋಮವಾರ ಎಲ್‌ಕೆಜಿ ಹಾಗೂ ಯುಕೆಜಿ ಮತ್ತು ನರ್ಸರಿ ಶಾಲೆಗಳನ್ನು ಸಂಭ್ರಮದಿಂದ ಆರಂಭಿಸಲಾಯಿತು.

ಶಾಲೆ ಕೋಣೆಗಳಿಗೆ ತಳಿರು– ತೋರಣ, ಹೂವಿನ ಹಾರಗಳು ಹಾಗೂ ಬಲೂನ್‍ಗಳನ್ನು ಕಟ್ಟಿ ಅಲಂಕರಿಸಲಾಗಿತ್ತು. ಮಕ್ಕಳಿಗೆ ಹೂವು, ಸಿಹಿ ಹಂಚಿ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಶರಣಬಸವೇಶ್ವರರು ಹಾಗೂ ಸರಸ್ವತಿ ಭಾವಚಿತ್ರಕ್ಕೆ ಮಕ್ಕಳಿಂದ ಹಾರ ಹಾಕಿಸಿ, ದೀಪ ಬೆಳಗುವ ಜೊತೆಗೆ ಶಾಲೆಯ ತರಗತಿಗಳಿಗೆ ಚಾಲನೆ ನೀಡಲಾಯಿತು. ಮೊದಲ ದಿನವೆ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರೂ ಶಾಲೆಗೆ ಆಗಮಿಸಿದರು.

ವಿದ್ಯಾರ್ಥಿಗಳ ಜೊತೆಗೆ ಹಿರಿಯ ಶಿಕ್ಷಕಿಯರಾದ ಶಾರಾದಾ ರಾಂಪೂರೆ, ನಂದಾ ಪಾಟೀಲ ಮತ್ತು ಶಾಲೆಯ ಎಲ್ಲ ಶಿಕ್ಷಕ ಹಾಗೂ ಶಿಕ್ಷಕಿಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.