ಶಹಾಬಾದ್: ‘ಕೇಂದ್ರ ಬಜೆಟ್ನಲ್ಲಿ 26 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹಕ್ಕುಗಳ ಬಗ್ಗೆ ಮೌನ ವಹಿಸಿರುವುದು ಬಲವಾಗಿ ಖಂಡಿಸುತ್ತೇವೆ’ ಎಂದು ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ಶೇಖಮ್ಮ ಕುರಿ ಹೇಳಿದರು.

ಅವರು ನೆಹರು ವೃತ್ತದಲ್ಲಿ ಅಂಗನವಾಡಿ ನೌಕರರ ಸಂಘದ(ಸಿಐಟಿಯು) ವತಿಯಿಂದ ಹಮ್ಮಿಕೊಂಡಿದ್ದ ಕೇಂದ್ರದ ಬಜೆಟ್ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದರು.

‘ಐಸಿಡಿಎಸ್, ಶಾಲಾ ಮಧ್ಯಾಹ್ನದ ಊಟ ಯೋಜನೆ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ನಂತಹ ಮೂಲಭೂತ ಸೇವಾ ಯೋಜನೆಗಳಲ್ಲಿನ ಮೂಲಸೌಕರ್ಯ ಮತ್ತು ಸೇವೆಗಳ ಗುಣಮಟ್ಟದ ಬಗ್ಗೆ ಬಜೆಟ್ನಲ್ಲಿ ಮೌನ ವಹಿಸಲಾಗಿದೆ. ಕಾರ್ಮಿಕ ಸಂಹಿತೆಗಳ ಮೂಲಕ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತೇವೆ ಎಂದು ಹೇಳುವ ಭಾರತ ಸರ್ಕಾರ, ತಳಮಟ್ಟದ ಕಾರ್ಯಕರ್ತರ ಸಂಭಾವನೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ’ ಎಂದು ಆರೋಪಿಸಿದರು.

‘ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಅಥವಾ ಪಿಂಚಣಿ ಇಲ್ಲ, ಗ್ರಾಚ್ಯುಟಿ ನೀಡುವ 2022 ರ ಸುಪ್ರೀಂ ಕೋರ್ಟ್ ಆದೇಶವನ್ನು ಸಹ ಕೇಂದ್ರ ಸರ್ಕಾರ ಇನ್ನೂ ಜಾರಿಗೆ ತಂದಿಲ್ಲ, ಅಂಗನವಾಡಿ ಯೋಜನೆಯು 2025ಕ್ಕೆ 50 ವರ್ಷಗಳನ್ನು ಪೂರೈಸಿದ್ದು, 3.38 ಲಕ್ಷಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು, 4.61 ಲಕ್ಷ ಕೇಂದ್ರಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ವಿರುದ್ಧ ಘೋಷಣೆ ಕೂಗಿ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ನಗರ ಪೊಲೀಸ ಠಾಣೆಯ ಸಿಬ್ಬಂದಿ ಪುತ್ರಪ್ಪ ಮತ್ತು ಸಚಿನ ಚವ್ಹಾಣ ಬಂದೋಬಸ್ತ್ ಮಾಡಿದ್ದರು. ಅಂಗನವಾಡಿ ನೌಕರರ ಸಂಘದ (ಸಿಐಟಿಯು) ಮೈತ್ರಾಬಾಯಿ ತಳವಾರ, ಅಂಬುಜಾ, ರುದ್ರಮ್ಮ, ಸುವರ್ಣ, ರಂಜೀತಾ, ಗುಜ್ಜಮ್ಮ ಹಾಗೂ ನಾಗಪ್ಪ ರಾಯಚೂರಕರ ಸೇರಿದಂತೆ ಅನೇಕ ಅಂಗನವಾಡಿ ನೌಕರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.