ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಜೀವ ಬೆದರಿಕೆ: ₹5 ಸಾವಿರ ದಂಡ

Published 7 ಜೂನ್ 2024, 15:56 IST
Last Updated 7 ಜೂನ್ 2024, 15:56 IST
ಅಕ್ಷರ ಗಾತ್ರ

ಕಲಬುರಗಿ: ಜಮೀನಿನಲ್ಲಿ ದನಗಳನ್ನು ಹೊಡೆದುಕೊಂಡು ಹೋಗುವಾಗ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಆರೋಪ ಸಾಬೀತಾದ ಹಿನ್ನೆಲೆ ಇಬ್ಬರು ಅಪರಾಧಿಗಳಿಗೆ ₹ 5 ಸಾವಿರ ದಂಡ ವಿಧಿಸಿ ಚಿಂಚೋಳಿಯ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್‌ ನ್ಯಾಯಾಧೀಶ ದತ್ತಕುಮಾರ್ ಆದೇಶ ನೀಡಿದ್ದಾರೆ.

ಚಿಂಚೋಳಿ ತಾಲ್ಲೂಕಿನ ಸುಂಠಾಣ ಗ್ರಾಮದ ನಿವಾಸಿಗಳಾದ ಇಸ್ಮಾಯಿಲ್‌ ಖಾನ್‌ ಹಾಗೂ ಚಿನ್ನುಮಿಯಾ ಅವರು ಪಕ್ಕದ ಜಮೀನಿನ ಬೀಜಾನಬಿ ಅವರಿಗೆ ಹೊಲದಲ್ಲಿ ದನಗಳು ಹೊಡೆದುಕೊಂಡು ಹೋಗುವಾಗ ಕಲ್ಲು ಹಾಗೂ ಕಟ್ಟಿಗೆಯಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿರುವುದು ಸಾಬೀತಾಗಿದ್ದು, ಪಿರ್ಯಾದುದಾರರಿಗೆ ₹ 10 ಸಾವಿರ ಪರಿಹಾರ ನೀಡುವಂತೆಯು ಕೋರ್ಟ್‌ ಆದೇಶಿಸಿದೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಶಾಂತಕುಮಾರ್ ಜಿ. ಪಾಟೀಲ ವಾದ ಮಂಡಿಸಿದ್ದರು.

ಚಾಲಕನಿಗೆ 1 ತಿಂಗಳ ಜೈಲು ಶಿಕ್ಷೆ

ಕಲಬುರಗಿ: ಕೆಎಸ್‌ಆರ್‌ಟಿಸಿ ಬಸ್‌ವೊಂದು ರಸ್ತೆಯಲ್ಲಿ ಹೊರಟಿರುವ ಎತ್ತಿಗೆ ಡಿಕ್ಕಿ ಹೊಡಿಸಿ ಎತ್ತು  ಸಾವನ್ನಪ್ಪಿದಕ್ಕೆ ಚಾಲಕನಿಗೆ ₹ 3 ಸಾವಿರ ದಂಡ ಹಾಗೂ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಿ ಚಿಂಚೋಳಿಯ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಹುಮನಾಬಾದ್ ತಾಲ್ಲೂಕಿನ ಹಿಪ್ಪರಗಾ ಗ್ರಾಮದ ಪ್ರಕಾಶ ಬಾಜೇನೂರು ಎಂಬುವವರು 2022ರ ಮಾರ್ಚ್‌ 29ರಂದು ಡಿಕ್ಕಿ ಹೊಡಿಸಿ ಎತ್ತಿಗೆ ಏನು ಆಗಿಲ್ಲ ಎಂದು ಬಸ್‌ ತೆಗೆದುಕೊಂಡು ಹೊರಟು ಹೋಗಿದ್ದರು. ಸ್ವಲ್ಪ ಸಮಯದಲ್ಲಿ ಎತ್ತು ಸಾವನ್ನಪ್ಪಿತ್ತು. ಅಪಘಾತ ಆರೋಪ ಸಾಬೀತಾದ ಹಿನ್ನೆಲೆ ಎತ್ತಿನ ವಾರಸುದಾರರಿಗೆ ಪರಿಹಾರವಾಗಿ ₹ 20 ಹಣ ನೀಡುವಂತೆಯೂ ಪ್ರಧಾನ ಸಿವಿಲ್‌ ನ್ಯಾಯಾಧೀಶ ದತ್ತಕುಮಾರ್ ಆದೇಶ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT