ಗುರುವಾರ , ಫೆಬ್ರವರಿ 9, 2023
30 °C

ಪರಿಶಿಷ್ಟ ವ್ಯಕ್ತಿ ಮೇಲೆ ಹಲ್ಲೆ; 6 ಜನರ ವಿರುದ್ಧ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಡ್ರಾಮಿ: ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಾಗ ಸ್ವಚ್ಚಗೊಳ್ಳಿಸಲು ತೆರಳಿದ ವೇಳೆ ಜಾತಿ ನಿಂದನೆಯ ಅವಾಚ್ಯ ಶಬ್ದದಿಂದ ಬೈದು ಹಲ್ಲೆ ಮಾಡಿದ ಆರೋಪದ ಮೇರೆಗೆ ಮರೆಪ್ಪ ಮಡಿವಾಳಪ್ಪ ಹೊಸಮನಿ ಎಂಬುವವರು ಪಂಚಾಯತರಾಜ್ ಎಂಜಿನಿಯರಿಂಗ್ ವಿಭಾಗದ ಕಿರಿಯ ಎಂಜಿನಿಯರ್ ಸಿದ್ದಪ್ಪ ದೊಡ್ಡಮನಿ ಸೇರಿದಂತೆ ಐವರ ವಿರುದ್ಧ ಜಾತಿ ನಿಂದನೆ ಕಾಯ್ದೆ ಸೇರಿದಂತೆ ವಿವಿಧ ಕಲಂಗಳಡಿ ಯಡ್ರಾಮಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಿಪ್ಪಣ್ಣಗೌಡ ಸಿದ್ದಪ್ಪಗೌಡ ಕಡಕೋಳ, ವೀರೇಶ ತಿಪ್ಪಣ್ಣಗೌಡ ಕಡಕೋಳ, ಮಹಾಂತೇಶ ತಿಪ್ಪಣ್ಣ ಕಡಕೋಳ, ಮಡಿವಾಳಪ್ಪ ತಿಪ್ಪಣ್ಣ ಕಡಕೋಳ, ವಸುಂದರಬಾಯಿ ತಿಪ್ಪಣ್ಣಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ಪ್ರಯುಕ್ತ ಡಿವೈಎಸ್ಪಿ ಅವರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.