ಸೋಮವಾರ, ನವೆಂಬರ್ 29, 2021
20 °C

ಬಹಮನಿ ಫೌಂಡೇಷನ್‌ನ ವಿವಿಧ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಇಲ್ಲಿನ ಬಹಮನಿ ಫೌಂಡೇಷನ್‌ ಖಿಲ್ಲಾ– ಗುಲಬರ್ಗಾ ವತಿಯಿಂದ ನಗರದಲ್ಲಿ ಭಾನುವಾರ ಯೋಜಿಸಿದ್ದ ‘7ನೇ ಜಷ್ನೇ ರಹಮತ್‌ ಉಲ್‌ ಲಿಲ್‌ ಅಲ್‌ಅಮೀನ್‌’ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಖಾಜಿ ಮಹಮ್ಮದ್‌ ಹಫೀಜ್‌ ಉಲ್‌ ಹಸನ್‌ ಸಿದ್ದಿಖಿ ಶಹೀದ್‌ ಅವರಿಗೆ ‘ಹಜರತ್‌ ಅಬೂಬಕರ್‌ ಸಿದ್ದಿಖಿ’ ಪ್ರಶಸ್ತಿ, ಶಿಕ್ಷಣ ತಜ್ಞರಾದ ಡಾ.ಶಮೀಮ್‌ ಸುರಯ್ಯ, ಡಾ.ಸಯ್ಯದ್‌ ರಹಮತ್‌ ಉಲ್ಲಾ, ಪತ್ರಕರ್ತ ಮಹಮ್ಮದ್‌ ಅಬ್ದುಲ್‌ ಹಕೀಮ್‌ ಶಕೀರ್‌ ಹಾಗೂ ನಿವೃತ್ತ ಪ್ರಾಂಶುಪಾಲರಾದ ಕಮಲಾದೇವಿ ಶುಕ್ಲಾ ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’ ನೀಡಲಾಯಿತು.

ಅಲ್ಲದೇ, ‘ಗುಲಬರ್ಗಾ ಅನ್ಮೋಲ್‌ ರತ್ನ ಅವಾರ್ಡ್‌’ ಅನ್ನು ಮಕ್ಕಳತಜ್ಞ ಡಾ.ರಮೇಶ ಯಳಸಂಗಿಕರ, ಹಿರಿಯ ವಕೀಲ ಡಾ.ಮಖ್ಸೂದ್‌ ಅಪ್ಜಲ್‌ ಜಾಗೀರ್ದಾರ್, ಸಾಹಿತಿ ಮಹಮ್ಮದ್‌ ಅಮ್ದದ್‌ ಹುಸೇನ್‌ ಜಾವೀದ್‌, ಇತಿಹಾಸ ತಜ್ಞ ಡಾ.ಶಶಿಶೇಖರ ರೆಡ್ಡಿ, ಶಾಯರಿ ಬರಹಗಾರ ನೂರುದ್ದೀನ್‌ ನೂರ್‌, ಹಿರಿಯ ಕಲಾವಿದರಾದ ಡಾ.ಎಸ್.ಎಂ. ನೀಲಾ, ಉಪನ್ಯಾಸಕರಾದ ಡಾ.ಅನೀಸ್‌ ಸಿದ್ದಿಖಿ, ಸಯ್ಯದ್‌ ಶಾ ಫರೀದುದ್ದಿನ್‌ ಸಖಿ ಸರಮಸ್ತ್‌, ವಿಜ್ಞಾನ ಶಿಕ್ಷಕರಾದ ನವೀದ್‌ ಅಂಜುಮ್‌ ಅವರಿಗೆ ಪ್ರದಾನ ಮಾಡಲಾಯಿತು.

‌ಬಹಮನಿ ಫೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷ ಖಾಜಿ ರಿಜ್ವಾನ್‌ ಉರ್‌ ರಹಮಾನ್‌ ಸಿದ್ದಿಖಿ ಮಶೂದ್‌ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಜರತ್‌ ಡಾ.ಶಾ ಮೊಹಮ್ಮದ್ ಅಫಜಲುದ್ದೀನ್‌ ಜುನೈದಿ ಸಿರಾಜ್‌ ಬಾಬಾ, ಹಜರತ್‌ ಸಯ್ಯದ್‌ ಶಾ ಯದುಲ್ಲಾಹ್‌ ಹುಸೇನಿ ನಿಜಾಮ್ ಬಾಬಾ, ಮೊಹಮ್ಮದ್‌ ಅಜೀಮುದ್ದೀನ್‌, ಖಾಜಿ ಹಫೀಜ್‌ ಉಲ್‌ ಹಸನ್‌ ಸಿದ್ದಿಖಿ, ಅಬ್ದುಲ್‌ ಅಜೀಜ್‌ ರಾಜಪೂತ್‌ ಚಿಸ್ತ್ರಿ, ಸಯ್ಯದ್‌ ಮಜರ್‌ ಹುಸೇನ್‌, ಫಾದರ್‌ ಸ್ಟ್ಯಾನಿ ಲೋಬೊ, ಭಾಯಿದೀಫ್‌ ಸಿಂಗ್‌ ಆಗಮಿಸಿದ್ದರು. ಫೌಂಡೇಷನ್‌ನ ಎಲ್ಲ ಸದಸ್ಯರು, ಪ್ರಶಸ್ತಿ ಪುರಸ್ಕೃತರ ಕುಟುಂಬ ವರ್ಗದವರೂ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು