ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಜಯಂತಿ: ಗಮನ ಸೆಳೆದ ಕಾರ್‌ ರ್‍ಯಾಲಿ

Last Updated 1 ಮೇ 2022, 4:41 IST
ಅಕ್ಷರ ಗಾತ್ರ

ಕಲಬುರಗಿ: ಬಸವ ಜಯಂತಿ ಅಂಗವಾಗಿ ಇಲ್ಲಿನ ಬಸವ ಯುವಸೇನೆ ಹಾಗೂ ರಾಹುಲ್‌ ಹೊನ್ನಳ್ಳಿ ಗೆಳೆಯರ ಬಳಗದ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್‌ ಹಾಗೂ ಬೈಕ್‌ ರ್‍ಯಾಲಿ ಗಮನ ಸೆಳೆಯಿತು.

ಇಲ್ಲಿನ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ‍್ಪ ಅಪ್ಪ ಹಾಗೂ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಜಂಟಿಯಾಗಿ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಮುಖಂಡರಾದ ಅಲ್ಲಮಪ್ರಭು ಪಾಟೀಲ, ನೀಲಕಂಠರಾವ ಮೂಲಗೆ, ವಿಜಯಕುಮಾರ ಜಿ.ಆರ್., ಶರಣಕುಮಾರ ಮೋದಿ,ಡಾ.ಕಿರಣ ದೇಶಮುಖ, ಪ್ರವೀಣ ಪಾಟೀಲ ಹರವಾಳ, ಸಂತೋಷ ಬಿಲಗುಂದಿ, ಗೀತಾ ವಾಡೇಕರ, ರಾಹುಲ ಹೊನ್ನಳ್ಳಿ, ಉದಯ ಪಾಟೀಲ, ಚೇತನ್‌ ಹಿರೇಮಠ, ಸಂದೇಶ ಕಮಕನೂರ, ಶರಣು ಪಾಟೀಲ, ದೀಪಕ ತಿವಾರಿ, ಸಂದೀಪ ಹುಲಿ, ನಾಗರಾಜ ಬಿರಾದಾರ, ನಾಗರಾಜ ದೇಸಾಯಿ, ಶಿವು ಹೆಡೆ, ರಾಕೇಶ ವಾಡೇಕರ, ಸಂತೋಷ ನಾಟೀಕರ, ದೀಪಕ ಬಬಲಾದಕರ್, ಈಶ್ವರ ರಾಠೋಡ, ಹರೀಶ ಕಾನಪೂರ, ಅನಿಲ ಆಡೆ, ಬಸವರಾಜ ಅನವಾರ ಇದ್ದರು.

ಶರಣಬಸವೇಶ್ವರ ದೇವಸ್ಥಾನದಿಂದ ಆರಂಭವಾದ ರ್‍ಯಾಲಿ ಕೋರ್ಟ್‌ ಸರ್ಕಲ್‌, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತ, ಅನ್ನಪೂರ್ಣ ಸರ್ಕಲ್, ಜಗತ್‌ ವೃತ್ತ, ಅಲ್ಲಿಂದ ಜಿಲ್ಲಾ ಆಸ್ಪತ್ರೆಯ ಸರ್ಕಲ್‌, ಖರ್ಗೆ ಸರ್ಕಲ್‌ ಮಾರ್ಗವಾಗಿ, ಸೇಡಂ ರಸ್ತೆಯಲ್ಲಿ ಸಂಚರಿಸಿತು. ಇಎಸ್‌ಐ ಆಸ್ಪತ್ರೆಯವರೆಗೂ ಹೋಗಿ ಮರಳಿ ಖರ್ಗೆ ವೃತ್ತಕ್ಕೆ ಬಂದು ಅಂತ್ಯಗೊಂಡಿತು.

80ಕ್ಕೂ ಹೆಚ್ಚು ಕಾರ್‌ಗಳು, ಹಲವು ಬೈಕ್‌ಗಳ ಸಮೇತ ಯುವಕ, ಯುವತಿಯರು ರ್‍ಯಾಲಿ ನಡೆಸಿದರು. ಮಾರ್ಗದುದ್ದಕ್ಕೂ ಬಸವೇಶ್ವರ ಮಾಹಾರಾಜ್‌ ಕಿ ಜೈ, ಅಣ್ಣ ಬಸವಣ್ಣನಿಗೆ ಜಯವಾಗಲಿ ಎಂಬ ಘೋಷಣೆಗಳು ಮೊಳಗಿದವು. ಎಲ್ಲ ವಾಹನಗಳ ಮೇಲೂ ಬಸವ ಧ್ವಜಗಳು ಹಾರಾಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT