ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಾಂಸ್ಕೃತಿಕ ನಾಯಕನ ಸಂಸ್ಕೃತಿ ನಮ್ಮದಾಗಲಿ’

Published 10 ಮೇ 2024, 15:55 IST
Last Updated 10 ಮೇ 2024, 15:55 IST
ಅಕ್ಷರ ಗಾತ್ರ

ಕಮಲಾಪುರ: ‘ಲಿಂಗ, ಜಾತಿ, ಮತ, ಪಂಥ, ಧರ್ಮ, ಮೇಲು, ಕೀಳು ಎಂಬುದನ್ನು ತೊಡೆದು ಹಾಕಿ ಕಾಯಕ ದಾಸೋಹಕ್ಕೆ ಒತ್ತುಕೊಟ್ಟು ಸಮನತೆಗಾಗಿ ಹೋರಾಡಿದ ಸಾಂಸ್ಕೃತಿಕ ನಾಯಕ ಬಸವೇಶ್ವರರ ಸಂಸ್ಕೃತಿ ನಮ್ಮದಾಗಬೇಕು’ ಎಂದು ತಹಶೀಲ್ದಾರ್‌ ಮೋಸಿನ್‌ ಅಹಮ್ಮದ್‌ ತಿಳಿಸಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿ, ‘ಕರ್ನಾಟಕದ ಅಸ್ಮಿತೆಯ ಪ್ರತೀಕವಾಗಿ ಬಸವೇಶ್ವರರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿರುವುದು ಸಂತಸ ತಂದಿದೆ. ಅವರ ತತ್ವಾದರ್ಶ ಸಾರ್ವಕಾಲಿಕವಾಗಿವೆ. ಮಹಾನಿ ತತ್ವಜ್ಞಾನಿ ಬಸವೇಶ್ವರರು ಹಾಗೂ ಆದರ್ಶಗಳನ್ನು ವಿಶ್ವಕ್ಕೆ ಪರಿಚಯಿಸುವ ಅಗತ್ಯವಿದೆ’ ಎಂದರು.

ಬೆಳಿಗ್ಗೆ ಬಸವೇಶ್ವರರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ವಚನ ಪಠಣ ಮಾಡಲಾಯಿತು. ತಹಶೀಲ್ದಾರ್‌ ಮೋಸೀನ್‌ ಅಹಮ್ಮದ್‌ ಆಗಮಿಸಿ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.

ಯುವಕರು ಬೈಕ್ ರ್‍ಯಾಲಿ ನಡೆಸಿದರು. ರಾತ್ರಿ ಬಸವೇಶ್ವರರ ಪುತ್ತಳಿ ಮೆರವಣಿಗೆ ಮಾಡಲಾಯಿತು. ಬಸ್‌ ನಿಲ್ದಾಣ ಪ್ರದೇಶದಿಂದ ಬಸವೇಶ್ವರ ಪುತ್ಥಳಿವರೆಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ಮುಖಂಡರಾದ ಗುರುರಾಜ ಮಾಟೂರ, ರಾಮಲಿಂಗ ಚಿಕ್ಕೆಗೌಡ, ಶಿವಕುಮಾರ ದೋಶೆಟ್ಟಿ, ಬಸವರಾಜ ಮಠಪತಿ, ಶಿವಶರಣ ದೋಶೆಟ್ಟಿ, ಸಂತೋಷ ರಾಂಪೂರ, ಬಸವರಾಜ ಸೂಗೂರ, ಬಾಬುರಾವ ಬಿರಾದಾರ, ಅಮರ ಚಿಕ್ಕೆಗೌಡ, ಶರಣು ರಟಕಲ್‌, ಬಸವರಾಜ ಚಿಕ್ಕೆಗೌಡ, ಮಲ್ಲಿಕಾರ್ಜುನ ಮಾಟೂರ, ವಿಜಯಕುಮಾರ ಮಾಟೂರ, ಮಲ್ಲಿನಾಥ ಹಳ್ಳಾ, ವಿಜಯಕುಮಾರ ಸೂಗೂರ, ನಾಗೇಂದ್ರ ಗಿರಿ, ಮಡಿವಾಳಪ್ಪ ದೋಶೆಟ್ಟಿ, ಸಂತೊಷ ಕಲ್ಯಾಣ, ರಾಘವೇಂದ್ರ ಭಾಲ್ಕಿ, ಗುರುರಾಜ ಬಮ್ಮಣ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT