ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗಲಮಡಿ: ಬಸವಲಿಂಗ ಅವಧೂತರ ಜಾತ್ರೆ

Published 30 ಮಾರ್ಚ್ 2024, 14:44 IST
Last Updated 30 ಮಾರ್ಚ್ 2024, 14:44 IST
ಅಕ್ಷರ ಗಾತ್ರ

ಚಿಂಚೋಳಿ: ‘ತಾಲ್ಲೂಕಿನ ದೇಗಲಮಡಿಯ ಬಸವಲಿಂಗ ಅವಧೂತರವರ 12ನೇ ಜಾತ್ರಾ ಮಹೋತ್ಸವ ಏ.2 ಮತ್ತು 3ರಂದು ನಡೆಯಲಿದೆ’ ಎಂದು ಭಕ್ತರಾದ ದೇವೇಂದ್ರ ಕರಂಜೆ ತಿಳಿಸಿದ್ದಾರೆ.

ಮಾ.27ರಿಂದ ಬಸವಲಿಂಗ ಅವಧೂತರ ಆಶ್ರಮದಲ್ಲಿ ಭಜನಾ ಸಪ್ತಾಹ ಆರಂಭವಾಗಿದ್ದು ಏ.2ರಂದು ಸಮಾರೋಪಗೊಳ್ಳಲಿದೆ. ಅಕ್ಕಮಹಾದೇವಿ ತೊಟ್ಟಿಲೋತ್ಸವ ಹಮ್ಮಿಕೊಳ್ಳಲಾಗಿದ್ದು, ಹಾರಕೂಡ ಚನ್ನವೀರ ಶಿವಾಚಾರ್ಯರು ಉದ್ಘಾಟಿಸಲಿದ್ದಾರೆ. ಬಸವಲಿಂಗ ಅವಧೂತರು ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಡಾ.ಅವಿನಾಶ ಜಾಧವ, ಬೀದರ್ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಮುಖಂಡ ಲಕ್ಷ್ಮಣ ಆವುಂಟಿ, ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ ಭಾಗವಹಿಸಲಿದ್ದಾರೆ.

ಏ.3ರಂದು ಬೆಳಿಗ್ಗೆ 8.30ಕ್ಕೆ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಗಳ ಪಲ್ಲಕ್ಕಿ ಉತ್ಸವ ಪೂರ್ಣಕುಂಭ, ಕಳಸದ ಮೆರವಣಿಗೆಯೊಂದಿಗೆ ನಡೆಯಲಿದೆ. ಸಂಜೆ 4.40ಕ್ಕೆ ರಥೋತ್ಸವ, 5.30ಕ್ಕೆ ಧರ್ಮಸಭೆ ಹಮ್ಮಿಕೊಳ್ಳಲಾಗಿದ್ದು, ಬಸವಲಿಂಗ ಅವಧೂತರು ಸಾನ್ನಿಧ್ಯ ವಹಿಸಲಿದ್ದಾರೆ. ಹವಾ ಮಲ್ಲಿನಾಥ ಮಹಾರಾಜರು ನೇತೃತ್ವ ವಹಿಸಿದರೆ, ಖೇಳಗಿಯ ಶಿವಲಿಂಗ ಸ್ವಾಮೀಜಿ, ಯರನಾಳದ ಶಿವಪ್ರಸಾದ ದೇವರು, ಸಿಂಧನಕೇರಾದ ಹೊನ್ನಲಿಂಗ ಸ್ವಾಮೀಜಿ, ಗ್ರಾ.ಪಂ.ಅಧ್ಯಕ್ಷೆ ಮಾರುತಿ ಘಾಳನೋರ್, ಡಿವೈಎಸ್ಪಿ ಸಂಗಮನಾಥ ಹಿರೇಮಠ ಪಾಲ್ಗೊಳ್ಳಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT