ವಾಡಿ: ‘ಬಿತ್ತನೆಗೆ ಮೊದಲು ಆಶಾಭಾವ ಮೂಡಿಸಿದ್ದ ಮುಂಗಾರು ಮಳೆ ಏಕಾಏಕಿ ಕಣ್ಮರೆಯಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ಜೊತೆಗೆ 15 ದಿನಗಳಿಂದ ನಿರಂತರವಾಗಿ ಬೀಸುತ್ತಿರುವ ಒಣಗಾಳಿ ಬಿತ್ತಿರುವ ಬೆಳೆಯ ಉಸಿರು ಬಿಗಿಯುವಂತೆ ಮಾಡುತ್ತಿದೆ.

ಮುಂಗಾರು ಪೂರ್ವ ಮತ್ತು ನಂತರ ಉತ್ತಮ ಮಳೆಯಾಗಿತ್ತು. ಆ ಭರವಸೆ ಮೇಲೆ ಬಿತ್ತನೆ ಮಾಡಿದ್ದ ನಾಲವಾರ ವಲಯದ ಮಸಾರಿ ಜಮೀನುಗಳಲ್ಲಿ ಬಿತ್ತನೆ ಮಾಡಿರುವ ಬೆಳೆಗಳಿಗೆ ಮಳೆಯ ತೀವ್ರ ಕೊರತೆ ಕಾಡುತ್ತಿದ್ದು, ರೈತರನ್ನು ಕಂಗಾಲಾಗಿಸಿದೆ. ಅವಧಿಗೂ ಮುಂಚೆ ಸುರಿದು ಭರವಸೆ ಮೂಡಿಸಿದ್ದ ಮುಂಗಾರು ಮಳೆ 15 ದಿನಗಳಿಂದ ನಾಪತ್ತೆಯಾಗಿ ಒಣಗಾಳಿ ಹೆಚ್ಚಾಗಿ ಬೀಸುತ್ತಿದೆ. ಹೆಸರು, ತೊಗರಿ, ಹತ್ತಿ ಬೆಳೆಗಳಿಗೆ ಒಣಹವೆ ದುಸ್ವಃಪ್ನವಾಗಿ ಕಾಡುತ್ತಿದೆ.

‘ಉತ್ತಮ ಮಳೆಯ ಭರವಸೆಯೊಂದಿಗೆ ದುಬಾರಿ ಬೆಲೆಯ ಹತ್ತಿಬೀಜ ಬಿತ್ತಿದ್ದೆ. ಆದರೆ ಹಸಿ ತೇವಾಂಶ ಕೊರತೆಯಿಂದ ನಾಟಿಕೊಂಡಿಲ್ಲ. ಮಳೆ ಬಂದರೆ ಪುನಃ ಬಿತ್ತಬೇಕು’ ಎಂದು ರೈತರಾದ ಖೂಬು ರಾಠೋಡ, ಹರಿ ರಾಠೋಡ, ಗೋಪಾಲ ಸೋಮಲ ನಾಯಕ ಹೇಳಿದ್ದಾರೆ.

‘ದುಬಾರಿ ಬೀಜ, ರಸಗೊಬ್ಬರ ಹಾಗೂ ಬಿತ್ತನೆ ಕೂಲಿ ಎಲ್ಲವೂ ಕೊಚ್ಚಿ ಹೋಗಿ, ಈ ಬಾರಿಯೂ ಸಂಕಷ್ಟ ಹೆಗಲೇರುವ ಆತಂಕ ಎದುರಾಗಿದೆ’ ಎಂದು ಲಾಡ್ಲಾಪುರ ರೈತರಾದ ಗೌಡಪ್ಪ ಕಚಾಪುರ, ಅನಿಲ ಬೆನಕನಹಳ್ಳಿ ಬೇಸರ ವ್ಯಕ್ತಪಡಿಸಿದರು.

ಲಾಡ್ಲಾಪುರ, ನಾಲವಾರ, ಬಾಪುನಗರ, ಯಾಗಾಪುರ, ಬೆಳಗೇರಾ, ಹಣ್ಣಿಕೇರಾ ಸಹಿತ ಹಲವೆಡೆ ಬಿತ್ತಿರುವ ಬೆಳೆಗಳಿಗೆ ಮಳೆಯ ತೀವ್ರ ಕೊರತೆ ಕಾಡುತ್ತಿದೆ. ತಕ್ಷಣ ಮಳೆ ಬರದಿದ್ದರೆ ಇದ್ದ ಅಲ್ಪ ಬೆಳೆಯೂ ಕೈ ತಪ್ಪುವ ಭೀತಿ ಎದುರಾಗಿದೆ.

ವಿದ್ಯುತ್ ಸಮಸ್ಯೆ: ಮಳೆ ಕೈಕೊಟ್ಟಿದ್ದು ಒಣಗುತ್ತಿರುವ ಬೆಳೆಗಳಿಗೆ ಕೊಳವೆಬಾವಿ ಮೂಲಕ ನೀರುಣಿಸುವ ರೈತರ ಯತ್ನಕ್ಕೆ ವಿದ್ಯುತ್ ಸಮಸ್ಯೆ ಸವಾಲಾಗಿದೆ. ನಿರಂತರವಾಗಿ ಗಾಳಿ ಬೀಸುತ್ತಿದ್ದು ವಿದ್ಯುತ್ ಪದೇ ಪದೇ ಕೈ ಕೊಡುತ್ತಿದೆ. ಜೋತುಬಿದ್ದಿರುವ ವಿದ್ಯುತ್ ತಂತಿಗಳು ಗಾಳಿಯಿಂದ ಅಲುಗಾಡಿ ಒಂದಕ್ಕೊಂದು ಸ್ಪರ್ಶಿಸಿ ವಿದ್ಯುತ್ ಕಡಿತಕ್ಕೆ ಕಾರಣವಾಗುತ್ತಿವೆ. ಹಲವೆಡೆ ವಿದ್ಯುತ್ ಪರಿವರ್ತಕಗಳು(ಟಿಸಿ) ಕೈಕೊಡುತ್ತಿದ್ದು, ರೈತರನ್ನು ಮತ್ತಷ್ಟು ಸಮಸ್ಯೆಗೆ ದೂಡಿದೆ. ವಿದ್ಯುತ್ ಸಮಸ್ಯೆಗೆ ಜೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಹಲವು ರೈತರು ದೂರಿದ್ದಾರೆ.

ಮುಂಗಾರು ಪೂರ್ವ ರೋಹಿಣಿ ಮಳೆ ಉತ್ತಮವಾಗಿ ಸುರಿದಿದ್ದರಿಂದ ಹೆಸರು ಬಿತ್ತನೆ ಮಾಡಿದ್ದೆ. ಆದರೆ ಮಳೆ ಅತಿಯಾಗಿದ್ದರಿಂದ ಹೆಸರು ಹಾಳಾಯ್ತು. ನಂತರ ಮೃಗಶಿರ ಮಳೆಯ ನಂತರ ಪುನಃ ಬಿತ್ತಿದ್ದ ಬೆಳೆಗೆ ಮಳೆಯ ಕೊರತೆ ಕಾಡುತ್ತಿದೆ
ಗೌಡಪ್ಪ ಕಚಾಪುರ ಲಾಡ್ಲಾಪುರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.