ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40 ವಿದ್ಯಾರ್ಥಿನಿಯರಿಗೆ ಸೈಕಲ್‌ ವಿತರಣೆ

Published 6 ಜನವರಿ 2024, 15:45 IST
Last Updated 6 ಜನವರಿ 2024, 15:45 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಚೇತನ ಯೂಥ್‌ ಫೋರಂ ಸಂಸ್ಥೆಯ ಪ‍್ರಾಥಮಿಕ ಹಾಗೂ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟ ಹಾಗೂ ರೋಟರಿ ಕ್ಲಬ್‌ ವತಿಯಿಂದ ವಿದ್ಯಾರ್ಥಿನಿಯರಿಗೆ ಸೈಕಲ್‌ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಚೇತನ ಯೂಥ್‌ ಫೋರಂ ಪ್ರೌಢಶಾಲೆ ಗಾಜಿಪೂರದಲ್ಲಿ ನಡೆದ ಸಮಾರಂಭವನ್ನು ಮೇಯರ್‌ ವಿಶಾಲ ದರ್ಗಿ ಉದ್ಘಾಟಿಸಿ, ‘ವಿದ್ಯಾರ್ಥಿಗಳ ಪಥಸಂಚಲನ ಹಾಗೂ ಶಿಸ್ತು ಗಮನಿಸಿ, ‘ಅಂತರರಾಷ್ಟ್ರೀಯ ಶಾಲೆಗೆ ಆಗಮಿಸಿದಂತೆ ಅನಿಸುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ರೋಟರಿ ಕ್ಲಬ್‌ ಕಲಬುರಗಿ ಉತ್ತರದ ಅಧ್ಯಕ್ಷ ರಾಮ್‌ ಶಾನ್‌ ಭೋಗ ಅವರು ಮಾತನಾಡಿ, ‘ರೋಟರಿ ಕ್ಲಬ್‌ ವತಿಯಿಂದ ಈ ಶೈಕ್ಷಣಿಕ ವರ್ಷದ 40 ವಿದ್ಯಾರ್ಥಿನಿಯರಿಗೆ ಸೈಕಲ್‌ಗಳನ್ನು ವಿತರಿಸುತ್ತಿರುವುದು ಸಂತೋಷವೆನಿಸುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಲಬ್‌ ಕಾರ್ಯದರ್ಶಿ ನೌಶಾದ್‌ ಇರಾನಿ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಪಿ.ಎಸ್‌.ಮಾಲಿಪಾಟೀಲ್‌, ಕಾರ್ಯದರ್ಶಿ ದಿನೇಶ್ ಪಾಟೀಲ, ಖಜಾಂಚಿ ಅನಸೂಯಾ ಮಠಪತಿ, ಸಂಸ್ಥೆ ಸದಸ್ಯರಾದ ಎಸ್‌.ಕೆ.ಹಿರೇಮಠ, ಸಿದ್ರಾಮಯ್ಯ ನಂದಿಕೋಲ್‌, ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸೃಷ್ಟಿ ಮಲ್ಲಿನಾಥ್‌, ಪ್ರೀತಿ ಬಸವರಾಜ್‌ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುರೇಖಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT