ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಫಜಲಪುರ: ನದಿಯಲ್ಲಿ ಕೊಚ್ಚಿಹೋಗಿದ್ದ ಯುವಕನ ಶವ ಪತ್ತೆ

Published : 20 ಆಗಸ್ಟ್ 2024, 15:29 IST
Last Updated : 20 ಆಗಸ್ಟ್ 2024, 15:29 IST
ಫಾಲೋ ಮಾಡಿ
Comments

ಅಫಜಲಪುರ: ತಾಲ್ಲೂಕಿನ ದೇವಲ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಬಂದು ಭೀಮಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದಾಗ ಕೊಚ್ಚಿಹೋಗಿದ್ದ ಹೈದರಾಬಾದ್‌ನ ಶ್ರವಣಕುಮಾರ ಎಂ.(30) ಅವರ ಶವ ಮಂಗಳವಾರ ಪತ್ತೆಯಾಗಿದೆ.

ಮರಣೋತ್ತರ ಪರೀಕ್ಷೆ ನಂತರ ಸಂಬಂಧಿಕರಿಗೆ ಶವವನ್ನು ನೀಡಲಾಯಿತು. ಶೋಧ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯಾದ ಅಶೋಕ್ ಜಮಾದಾರ, ಮುಬಾರಕ್ ಇಂಡಿಕರ, ನಾಗಯ್ಯ ದಿಕ್ಸಂಗಿ, ರೇವಣಸಿದ್ಧಯ್ಯ ಮಠಮತಿ, ಮಹಾಂತೇಶ ಜಮಾದಾರ, ಶಿವಾನಂದ ಕುಂಬಾರ, ಸದಾನಂದ ಸಿಂಪಿ, ಸಿದ್ದಲಿಂಗ ಪತ್ತಾರ ಸೇರಿದಂತೆ ದೇವಲ ಗಾಣಗಾಪುರ ಪೋಲಿಸ್ ಠಾಣೆ ಸಿಬ್ಬಂದಿ ಭಾಗವಹಿಸಿದ್ದರು.

ಹೈದರಾಬಾದ್‌ನಿಂದ ಶ್ರವಣಕುಮಾರ ಗೆಳೆಯರೊಂದಿಗೆ ಬಂದಿದ್ದರು. ಸೋಮವಾರ ನಸುಕಿನ ಜಾವ 5 ಗಂಟೆಗೆ ನದಿಯಲ್ಲಿ ಸ್ನಾನಕ್ಕಿಳಿದಾಗ ಕಾಲು ಜಾರಿ ಬಿದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT