ಶುಕ್ರವಾರ, ಫೆಬ್ರವರಿ 28, 2020
19 °C

2 ತಿಂಗಳಲ್ಲಿಯೇ ಹಾಳಾದ ಸೇತುವೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ರಾಜ್ಯ ಹೆದ್ದಾರಿ 75ರಲ್ಲಿ ಬರುವ ತಾಲ್ಲೂಕಿನ ಕನಕಪುರದಿಂದ ಚಿಮ್ಮನಚೋಡ ಮಧ್ಯೆ 2 ತಿಂಗಳ ಹಿಂದೆ ನಿರ್ಮಿಸಿದ ಚಿಕ್ಕ ಸೇತುವೆ(ಸಿಡಿ)ಯ ರಕ್ಷಣಾ ಗೋಡೆ ಮತ್ತೆ ಹಾಳಾಗಿವೆ.

ಸೇತುವೆಯ ಬೆಡ್‌ ಮೇಲೆ ಎರಡು ಕಡೆ ರಕ್ಷಣಾ ಗೋಡೆ ನಿರ್ಮಿಸಿ ಸುಣ್ಣ ಬಳಿಯಲಾಗಿದೆ. ಆದರೆ ಮಳೆಯ ನೀರು ಹರಿದು ಹೋಗುವ ನೈಸರ್ಗಿಕ ನಾಲಾದ ನೀರು ಹರಿದು ಹೋಗುವ ಮಾರ್ಗದಲ್ಲಿ ಸಿಡಿ ಕೆಳಭಾಗದಲ್ಲಿ ಮಣ್ಣಿನ ಗುಡ್ಡೆ ಹಾಕಿದ್ದರಿಂದ ನೀರು ಹರಿಯುವುದಕ್ಕೂ ಅಡಚಣೆಯಾಗಿದೆ.

ರಕ್ಷಣಾ ಗೋಡೆಯ ಎರಡು ಕಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿರುಕು ಬಿಟ್ಟಿವೆ. ಆದರೆ ಒಂದು ಭಾಗದ ರಕ್ಷಣಾ ಗೋಡೆಯ ಮಧ್ಯ ಭಾಗ ಉರುಳಿದೆ. ನೀರುಣಿಸದ ಕಾರಣ ನೀರು ಬಿರುಕು ಕಾಣಿಸಿಕೊಂಡಿದೆ ಎನ್ನುತ್ತಾರೆ ದಲಿತ ಸೇನೆಯ ತಾಲ್ಲೂಕು ಉಪಾಧ್ಯಕ್ಷ ಶ್ರೀಧರ ವಗ್ಗಿ.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)