ವಾಡಿ: ಪಟ್ಟಣದ ಸರ್ಕಾರಿ ಕನ್ಯಾ ಪ್ರಾಥಮಿಕ ಶಾಲೆಯಲ್ಲಿ ಎಸಿಸಿ ಕಾರ್ಖಾನೆಯ ಸಿಎಸ್ಆರ್ ವಿಭಾಗದಿಂದ ನಿರ್ಮಿಸಲಾದ ಎರಡು ಸುಸುಜ್ಜಿತ ಕೋಣೆಗಳನ್ನು ಕಾರ್ಖಾನೆ ದಕ್ಷಿಣ ವಲಯ ಉತ್ಪಾದನಾ ವಿಭಾಗದ ಮುಖ್ಯಸ್ಥ ಪರಾಗ ಶ್ರೀವಾಸ್ತವ ಈಚೆಗೆ ಲೋಕಾರ್ಪಣೆಗೊಳಿಸಿದರು. ಶಾಲೆಗೆ ಅಗತ್ಯವಿದ್ದ 2 ಕೊಠಡಿಗಳನ್ನು ₹ 22 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ನಂತರ ಮಾತನಾಡಿದ ಅವರು, ‘ಎಸಿಸಿ ಕಾರ್ಖಾನೆಯು ಸಾಮಾಜಿಕ ಜವಾಬ್ದಾರಿ ಮೆರೆಯುತ್ತಿದ್ದು ಶಿಕ್ಷಣ, ಆರೋಗ್ಯ, ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ. ಸಿಎಸ್ಆರ್ ವಿಭಾಗ ಶಾಲಾ ಕೋಣೆಗಳ ನಿರ್ಮಾಣಕ್ಕೆ ಅನುದಾನ ಬೇಡಿಕೆ ಸಲ್ಲಿಸಿದಾಗ ಆಡಳಿತ ಮಂಡಳಿ ₹22 ಲಕ್ಷ ಅನುದಾನ ನೀಡಿ, 4 ತಿಂಗಳಲ್ಲಿ ಕಾಮಗಾರಿ ಮುಗಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವಂತೆ ಸೂಚಿಸಲಾಗಿತ್ತು. ಅದರಂತೆ ಈಗ ಗುಣಮಟ್ಟದ 2 ಕೋಣೆಗಳು ದೊರಕಿದ್ದು ಖುಷಿ ನೀಡಿದೆ’ ಎಂದರು.

ಪ್ರಜಾವಾಣಿ ವರದಿ ಪರಿಣಾಮ: ನಿಜಾಮರ ಕಾಲದ ಉನ್ನತ ಅಧಿಕಾರಿಗಳು ಪಟ್ಟಣಕ್ಕೆ ಬಂದಾಗ ತಂಗಲು 1920ರಲ್ಲಿ ನಿರ್ಮಿಸಲಾಗಿದ್ದ ಪ್ರವಾಸಿ ಮಂದಿರವನ್ನು ಉರ್ದುಶಾಲೆ ನಂತರ 1987ರಲ್ಲಿ ಕನ್ನಡ ಕನ್ಯಾ ಪ್ರಾಥಮಿಕ ಶಾಲೆಯಾಗಿ ಬಳಸಿಕೊಳ್ಳಲಾಗುತ್ತಿತ್ತು. ಸಂಪೂರ್ಣವಾಗಿ ಶಿಥಿಲಗೊಂಡಿದ್ದ ಕೊಠಡಿಗಳು ಮಳೆ ಬಂದರೆ ಸೋರುತ್ತಿದ್ದವು. ಜತೆಗೆ ಸೂಕ್ತ ಗಾಳಿ, ಬೆಳಕಿನ ವ್ಯವಸ್ಥೆಯಿಲ್ಲದೇ, ಅವೈಜ್ಞಾನಿಕ ರೀತಿಯಲ್ಲಿ ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಇದು ವಿದ್ಯಾರ್ಥಿಗಳ ಕಲಿಕೆಗೆ ತೊಡಕಾಗಿತ್ತು.

ಈ ಕುರಿತು ‘ಪ್ರಜಾವಾಣಿ’ ಪತ್ರಿಕೆ 2022ರ ಅ.31ರಂದು ‘ಅವಸಾನದತ್ತ ನಿಜಾಮರ ಕಾಲದ ಶಾಲೆ’ ಎಂಬ ಶೀರ್ಷಿಕೆಯಡಿ ವಿಸ್ತೃತ ಸುದ್ದಿ ಪ್ರಕಟಿಸಿ ಆಡಳಿತದ ಗಮನ ಸೆಳೆದಿತ್ತು. ಸುದ್ದಿ ಪ್ರಕಟಿಸಿದ ಬಳಿಕ ಕಲಬುರಗಿ ಅಂದಿನ ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ ಅವರು ಭೇಟಿ ನೀಡಿ, ‘ಹೊಸ ಕೋಣೆಗಳ ನಿರ್ಮಾಣಕ್ಕೆ ಸ್ಥಳೀಯ ಎಸಿಸಿ ಕಾರ್ಖಾನೆ ಹಾಗೂ ಕೆಕೆಆರ್ಡಿಬಿಗೆ ಪತ್ರ ಬರೆದು ಅನುದಾನ ಒದಗಿಸುವಂತೆ ಮನವಿ ಮಾಡಲಾಗುವುದು’ ಎಂದು ತಿಳಿಸಿದ್ದರು.

ಎಸಿಸಿ ಸಿಎಸ್ಆರ್ ವಿಭಾಗದ ಅಂದಿನ ಮುಖ್ಯ ವ್ಯವಸ್ಥಾಪಕ ವೀರೇಶ ಎಂ. ಅವರು ಪ್ರಜಾವಾಣಿ ವರದಿ ಸಂಗ್ರಹಿಸಿ, ಶಾಲಾ ಕೋಣೆಗಳ ನಿರ್ಮಾಣಕ್ಕಾಗಿ ಅನುದಾನ ಕೋರಿ ಎಸಿಸಿ ಆಡಳಿತ ಮಂಡಳಿಗೆ ಮನವಿ ಮಾಡಿದ್ದರು. 2024 ಜೂನ್ ತಿಂಗಳಲ್ಲಿ ಅನುದಾನ ಒದಗಿಸಿ ಕಾಮಗಾರಿ ಆರಂಭಿಸಲಾಗಿತ್ತು. ಈಗ ಹೊಸ ಕೋಣೆಗಳ ನಿರ್ಮಾಣದಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಸಂತಸ ಮನೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.