ಕಲಬುರ್ಗಿ: ಜಿಲ್ಲಾ ಕೇಂದ್ರ ಕಲಬುರ್ಗಿಯಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಂಚಾರ ಎಂದಿನಂತಿದ್ದು, ಜಿಲ್ಲೆಯ ಸೇಡಂ ಹಾಗೂ ಚಿಂಚೋಳಿ ಡಿಪೊಗಳಿಂದ ಹೊರಡಬೇಕಿದ್ದ 40 ರೂಟ್ಗಳು ಅಗತ್ಯ ಸಿಬ್ಬಂದಿ ಇಲ್ಲದ್ದಕ್ಕೆ ರದ್ದುಗೊಂಡಿವೆ ಎಂದು ಕಲಬುರ್ಗಿ ಡಿಪೊ-1ರ ಸಾರಿಗೆ ನಿಯಂತ್ರಣಾಧಿಕಾರಿ ಸಂತೋಷಕುಮಾರ್ ತಿಳಿಸಿದರು.

ಅಂತರ್ ಜಿಲ್ಲಾ ಹಾಗೂ ಅಂತರ ರಾಜ್ಯ ಬಸ್‌ಗಳ ಸಂಚಾರ ಎಂದಿನಂತಿವೆ. ಬೆಳಿಗ್ಗೆ 11 ಗಂಟೆ ವೇಳೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 1769 ಮಾರ್ಗಗಳಲ್ಲಿ ಬಸ್‌ಗಳು ಕಾರ್ಯಾಚರಿಸಬೇಕಿತ್ತು. ಅವುಗಳ ಪೈಕಿ 1140 ಮಾರ್ಗಗಳಲ್ಲಿ ಸಂಚರಿಸಿವೆ.

629 ರೂಟ್‌ಗಳನ್ನು ರದ್ದುಪಡಿಸಲಾಗಿದೆ. ವಿಜಯಪುರ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚು ರೂಟ್ ಗಳು ರದ್ದಾಗಿವೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.