ಅಫಜಲಪುರ: ಪಟ್ಟಣದಲ್ಲಿ ಈಚೆಗೆ ಉದ್ಘಾಟನೆಯಾದ ಇಂದಿರಾ ಕ್ಯಾಂಟೀನ್ನಲ್ಲಿ ಶನಿವಾರ ಚಪಾತಿ ಖಾಲಿಯಾಗಿ ಊಟ ಮಾಡದೆ ಹಿಂತಿರುಗಿದರು. ಇನ್ನೂ ಕೆಲವರು ಅನ್ನವನ್ನಷ್ಟೇ ಊಟ ಮಾಡಿದರು.

ಇಂದಿರಾ ಕ್ಯಾಂಟೀನ್ನಲ್ಲಿ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಇದೆ. ಉಪಹಾರಕ್ಕೆ ₹5, ಊಟಕ್ಕೆ ₹10 ನಿಗದಿ ಮಾಡಲಾಗಿದೆ. ನಿತ್ಯ ಸಾವಿರ ಜನರಿಗೆ ಉಪಹಾರ ಮತ್ತು ಊಟ ಸೇರಿ ಸುಮಾರು ಸಾವಿರ ಜನರಿಗೆ ವ್ಯವಸ್ಥೆ ಇದೆ. ಆದರೆ ಶನಿವಾರ ಊಟದ ಸಮಯದಲ್ಲಿ ಒಂದು ಗಂಟೆಯಲ್ಲಿಯೇ ಚಪಾತಿ ಖಾಲಿಯಾಗಿ ಸಾಕಷ್ಟು ಜನರು ಕೆಲವರು ಮರಳಿ ಹೋದರು.

‘ಇಂದಿರಾ ಕ್ಯಾಂಟೀನ್ ಸಿಂಧನೂರು ಅವರಿಗೆ ಟೆಂಡರ್ ಆಗಿದ್ದು ಅವರು ನೋಡಿಕೊಳ್ಳುತ್ತಾರೆ. ಅವರ ಪರವಾಗಿ ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನಿತ್ಯ ಸಾವಿರ ಜನರಿಗೆ ಉಪಹಾರ ಮತ್ತು ಊಟ ನೀಡಲಾಗುತ್ತಿದೆ. ಆದರೆ ಒಬ್ಬೊಬ್ಬರು 3–4 ಟೋಕನ್ ತೆಗೆದುಕೊಳ್ಳುತ್ತಿರುವುದರಿಂದ ತೊಂದರೆ ಆಗುತ್ತದೆ. ಅದಕ್ಕಾಗಿ ಚಪಾತಿ ಸಾಕಾಗುತ್ತಿಲ್ಲ. ಮುಂದೆ ಸುಧಾರಣೆ ಮಾಡುತ್ತೇವೆ. ಜನರು ಸಹಕಾರ ನೀಡಬೇಕು’ ಎಂದು ಮೇಲ್ವಿಚಾರಕ ಕುಮಾರಸ್ವಾಮಿ ಮಾಹಿತಿ ನೀಡಿದರು.

‘ಹೆಚ್ಚಿನ ಜನರು ಇಲ್ಲಿ ಕೆಲಸ ಮಾಡಲು ಸರ್ಕಾರ ನಿಯಮ ಮಾಡಬೇಕು. ಊಟ ಮಾಡಿದ ತಟ್ಟೆಗಳನ್ನು ತೆಗೆಯುವವರು ಇರುವುದಿಲ್ಲ. ಸ್ವಚ್ಛತೆ ಕಂಡು ಬರುತ್ತಿಲ್ಲ. ಕೈ ತೊಳೆದುಕೊಂಡ ನೀರು ಮುಂದೆ ಹರಿದು ಹೋಗುವುದಿಲ್ಲ ಹೀಗಾಗಿ ಸಮಸ್ಯೆಯಾಗುತ್ತಿದೆ. ಇದರ ಬಗ್ಗೆ ಮೇಲಧಿಕಾರಿಗಳು ಗಮನ ಹರಿಸಬೇಕು’ ಎಂದು ಗ್ರಾಹಕರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.