ಬುಧವಾರ, ಆಗಸ್ಟ್ 10, 2022
24 °C

ಟಿಪ‍್ಪ‍ರ್‌– ಲಾರಿ ಡಿಕ್ಕಿ: ಕ್ಲೀನರ್‌ ಸಾವು, ಚಾಲಕನಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ನಗರದ ಜೇವರ್ಗಿ ರಸ್ತೆಯ ಫಹರತಾಬಾದ್‌– ಸರಡಗಿ ನಡುವೆ ಶನಿವಾರ ಲಾರಿ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಲಾರಿ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕನಿಗೂ ಗಂಭೀರ ಸ್ವರೂಪದ ಗಾಯಗಳಾಗಿವೆ.

ಆಳಂದ ಪಟ್ಟಣದ ನಿವಾಸಿ ಪ್ರಭಾಕರ (40) ಮೃತಪ‍ಟ್ಟ ಕ್ಲೀನರ್‌. ಗಾಯಗೊಂಡ ಲಾರಿ ಚಾಲಕ ಶಹಾಬುದ್ದೀನ್ ಅವರನ್ನು ಜಿಲ್ಲಾ  ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರ ಸಂಚಾರ ಪೊಲೀಸ್ ಠಾಣೆ–1ರಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.