ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಣಗಾಪುರದ ದತ್ತಾತ್ರೇಯ ದರ್ಶನ ಪಡೆದ ಸಿ.ಎಂ: ಪಂಚಲೋಹ, ಬೆಳ್ಳಿ ವಿಗ್ರಹ ಕಾಣಿಕೆ

ಕಲಬುರಗಿ ಜಿಲ್ಲೆ ಪ್ರವಾಸದಲ್ಲಿ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ
Last Updated 24 ಜನವರಿ 2023, 10:30 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಪ್ರವಾಸದಲ್ಲಿ ಇರುವ‌ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಅವರು ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಇಲ್ಲಿನ ಹೇರೂರ ಶಿಕ್ಷಣ ಸಂಸ್ಥೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿಠ್ಠಲ ಹೇರೂರ ಕಂಚಿನ ಮೂರ್ತಿ‌ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡಿ, ದತ್ತ ಮಹಾರಾಜರ ಪಾದುಕೆಗಳಿಗೆ ಪೂಜೆ ಸಲ್ಲಿಸಿದರು.

ದತ್ತಾತ್ರೇಯ ದೇವಸ್ಥಾನಕ್ಕೂ ಮುನ್ನ ಭೀಮಾ, ಅಮರ್ಜಾ ನದಿಗಳ ಸಂಗಮ ಸ್ಥಳಕ್ಕೆ ಭೇಟಿ ಕೊಟ್ಟು
ಸಂಗಮ ಸ್ಥಳದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ತದನಂತರ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ಪೂಜೆ, ಅಭಿಷೇಕ ಮಾಡಿ, ದತ್ತನ ಪಾದುಕೆಗಳ‌ ದರ್ಶನ ಪಡೆದರು.

'ಲೋಕ ಕಲ್ಯಾಣಾರ್ಥವಾಗಿ ಮುಖ್ಯಮಂತ್ರಿಗಳು ಪೂಜೆ ಸಲ್ಲಿಸಿದ್ದಾರೆ. ದರ್ಶನ, ಪೂಜೆಯ ನಂತರ ಮುಖ್ಯಮಂತ್ರಿಗಳಿಗೆ ಪಂಚಲೋಹ ಮತ್ತು ಬೆಳ್ಳಿ ವಿಗ್ರಹ ಕಾಣಿಕೆಯಾಗಿ ನೀಡಲಾಗಿದೆ' ಎಂದು ದೇವಸ್ಥಾನದ ಅರ್ಚಕ ಚಿಂತಾಮಣಿ ಪೂಜಾರಿ ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಸಿ.ಎಂ ಬಸವರಾಜ ಬೊಮ್ಮಾಯಿ ಅವರು, 'ಅತಿ ಭಕ್ತಿಭಾವದಿಂದ ಗಾಣಗಾಪುರಕ್ಕೆ ಬಂದಿದ್ದೇನೆ. ದತ್ತಾತ್ರೇಯರ ಆಶೀರ್ವಾದ ಮತ್ತು ಪ್ರೇರಣೆ ಸಿಕ್ಕಿದೆ. ರಾಜ್ಯದ ಅಭಿವೃದ್ದಿ, ಸಮೃದ್ಧಿಗಾಗಿ ಪ್ರಾರ್ಥನೆ ಮಾಡಿದ್ದೇನೆ' ಎಂದರು.

ಬಜೆಟ್‌ನಲ್ಲಿ ಅನುದಾನ: 'ಕಾಶಿ ವಿಶ್ವನಾಥ ಹಾಗೂ ಮಧ್ಯ ಪ್ರದೇಶದ ಕಾಳಹಸ್ತಿ ಮಾದರಿಯಲ್ಲಿ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಅಭಿವೃದ್ಧಿ ಪಡಿಸಲು ₹67 ಕೋಟಿ ಮೊತ್ತದ ನೀಲಿ ನಕ್ಷೆ ರೂಪಿಸಲಾಗಿದೆ. ಬರುವ ಬಜೆಟ್‌ನಲ್ಲಿ ಸೂಕ್ತ ಅನುದಾನ ನಿಗದಿ ಮಾಡಲಾಗುವುದು. ಈಗ ಅಭಿವೃದ್ಧಿಗೆ ₹5 ಕೋಟಿ ನೀಡಿದ್ದೇನೆ' ಎಂದು ತಿಳಿಸಿದರು.

ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮಡು, ಶಶೀಲ‌್ ಜಿ. ನಮೋಶಿ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT