ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಮ್ಸ್‌’ನಲ್ಲಿ ನೇಮಕಾತಿ ಅಕ್ರಮ ಆರೋಪ: ನೊಂದ ಅಭ್ಯರ್ಥಿಗಳಿಂದ ಸಚಿವರಿಗೆ ದೂರು

ಜಿಮ್ಸ್‌ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಆರೋಪ
Last Updated 25 ಆಗಸ್ಟ್ 2022, 12:30 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್‌)ಯ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ತಮಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳಲು ವಿಚಿತ್ರ ನಿಯಮಗಳನ್ನು ಹೇರಿದ್ದಾರೆ. ಆದ್ದರಿಂದ ನೇಮಕಾತಿಗೆ ತಡೆ ನೀಡಬೇಕು ಎಂದು ಒತ್ತಾಯಿಸಿ ಹುದ್ದೆ ವಂಚಿತ ಅಭ್ಯರ್ಥಿಗಳು ವೈದ್ಯಕೀಯ ಶಿಕ್ಷಣ ಸಚಿಗ ಡಾ.ಕೆ. ಸುಧಾಕರ್ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.

ಜಿಮ್ಸ್‌ ಸಂಸ್ಥೆಯ ಮಲ್ಟಿಡಿಸಿಪ್ಲಿನರಿ ರಿಸರ್ಚ್‌ ಯೂನಿಟ್‌ನ ಸಂಶೋಧನಾ ವಿಜ್ಞಾನಿ–ಸಿ, ಸಂಶೋಧನಾ ವಿಜ್ಞಾನಿ–ಬಿ, ಎರಡು ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳು, ಡೇಟಾ ಎಂಟ್ರಿ ಆಪರೇಟರ್ ಹಾಗೂ ಜಿಮ್ಸ್‌ನ ವೈರಲ್ ರಿಸರ್ಚ್ ಅಂಡ್ ಡೈಗ್ನೊಸ್ಟಿಕ್ ಲ್ಯಾಬೊರೇಟರಿಗೆ ರಿಸರ್ಚ್ ಸೈಂಟಿಸ್ಟ್–ಬಿ (ನಾನ್ ಮೆಡಿಕಲ್), ಡಾಟಾ ಎಂಟ್ರಿ ಆಪರೇಟರ್, ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಒಟ್ಟು 10 ಹುದ್ದೆಗಳಿಗೆ ಜುಲೈ 27ರಂದು ಸಂದರ್ಶನ ನಡೆಸಿತ್ತು.

‘ಪತ್ರಿಕೆಗಳಲ್ಲಿ ಜಾಹೀರಾತನ್ನೂ ನೀಡದೇ ತರಾತುರಿಯಲ್ಲಿ ಸಂದರ್ಶನ ನಡೆಸಲಾಗಿದೆ. ಯಾವುದೇ ಸಂಶೋಧನಾ ಅನುಭವ ಇಲ್ಲದವರನ್ನೂ ಹುದ್ದೆಗೆ ಪರಿಗಣಿಸಲಾಗಿದ್ದು, ಮಂಗಳವಾರ ಆಯ್ಕೆಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ರೋಸ್ಟರ್ ನಿಯಮವನ್ನು ಪಾಲಿಸಲಾಗಿಲ್ಲ. ವಿಆರ್‌ಡಿಎಲ್‌ ಸೈಂಟಿಸ್ಟ್–ಬಿ ಹುದ್ದೆಗೆ ತಮಗೆ ಬೇಕಾದ ವ್ಯಕ್ತಿಯನ್ನು ನೇಮಕ ಮಾಡಲು ವಯಸ್ಸಿನ ಮಿತಿಯನ್ನು ತಿದ್ದಲಾಗಿದೆ. ಸೈಂಟಿಸ್ಟ್–ಸಿ ಹುದ್ದೆಗೆ ಬೇಕಾದ ವಿದ್ಯಾರ್ಹತೆಯನ್ನು ಬದಿಗೊತ್ತಿ ಎಂ.ಟೆಕ್. ಪದವೀಧರೆಯನ್ನು ಆಯ್ಕೆ ಮಾಡಲಾಗಿದೆ. ಎಂ.ಎಸ್ಸಿ, ಪಿಎಚ್‌.ಡಿ. ಬಳಿಕ ನಾಲ್ಕು ವರ್ಷ ಅನುಭವ ಇದ್ದವರು ಇದ್ದರೂ ಬರೀ ಎಂ.ಎಸ್ಸಿ. ಪದವಿ ಪೂರೈಸಿದ ಮಹಿಳೆಯನ್ನು ಆಯ್ಕೆ ಮಾಡಲಾಗಿದೆ. ಮೂರು ವಿವಿಧ ಹುದ್ದೆಗಳು ಸೇರಿ ಒಂದೇ ಸಂದರ್ಶನ ನಡೆಸಲಾಗಿದೆ. ಈ ಸಂದರ್ಶನದ ವಿಡಿಯೊ ಚಿತ್ರೀಕರಣವನ್ನು ಮಾಡಿಲ್ಲ. ಹೀಗಾಗಿ ಅಂಕಗಳನ್ನು ತಿದ್ದಿರುವ ಶಂಕೆ’ ಇದೆ ಎಂದು ನೊಂದ ಅಭ್ಯರ್ಥಿಗಳು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT