ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂ: ಯುವಕರ ಕಾಳಜಿ ನಿರ್ಲಕ್ಷಿಸಿದ ಸರ್ಕಾರ

ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಕೇಂದ್ರದ ವಿರುದ್ಧ ವಾಗ್ದಾಳಿ
Last Updated 28 ಜೂನ್ 2022, 5:31 IST
ಅಕ್ಷರ ಗಾತ್ರ

ಸೇಡಂ:ಅಗ್ನಿಪಥ್ ಯೋಜನೆ ಜಾರಿಗೊಳಿಸುವ ಮೂಲಕಕೇಂದ್ರ ಸರ್ಕಾರ ದೇಶದ ಯುವಕರ ಭವಿಷ್ಯದ ಮೇಲೆ ಚೆಲ್ಲಾಟವಾಡುತ್ತಿದೆ. ಯುವಕರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ವಾಗ್ದಾಳಿ ನಡೆಸಿದರು.

ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಎದುರು ಸೇಡಂ ಮತ್ತು ಮುಧೋಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಗ್ನಿಪಥ್ ಯೋಜನೆ ವಿರೋಧಿ ಸೋಮವಾರ ಆಯೊಜಿಸಿದ್ಧ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ಈ ಹಿಂದೆ ನಮ್ಮ ಸರ್ಕಾರ ಆಡಳಿತದಲ್ಲಿದ್ದಾಗ ಸೈನಿಕರಿಗೆ 15 ವರ್ಷ ಕಾಯಂ ನೌಕರಿಯಿತ್ತು. ನಂತರ ನಿವೃತ್ತಿ ಪಡೆದ ಮೇಲೆ ಅವರಿಗೆ ಸರ್ಕಾರದಿಂದ ಸಹಾಯಧನ ಮಂಜೂರಾಗಿ, ಮುಂದಿನ ಕೆಲಸಕ್ಕೆ ಸೇರಿಕೊಳ್ಳಬಹುದಾಗಿತ್ತು. ಆದರೆ ಈಗಿನ ಕೇಂದ್ರ ಸರ್ಕಾರ ಗುತ್ತಿಗೆದಾರರ ಮೂಲಕ ದೇಶ ಸೇವೆಗೆ ಯುವಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದು, ಇದರಿಂದ ಯುವಕರಿಗೆ ಯಾವುದೇ ರೀತಿಯಲ್ಲಿ ಲಾಭವಿಲ್ಲ. ಸರ್ಕಾರದ ಅನೇಕ ಯೋಜನೆಗಳು ಭವಿಷ್ಯದ ದೂರದೃಷ್ಟಿ ಹೊಂದದೆ, ತಾತ್ಕಾಲಿಕತೆಯಿಂದ ಕೂಡಿವೆ. ಹೀಗಾಗಿ ಯಾವುದೇ ಯೋಜನೆಗಳು ಯಶಸ್ವಿಯಾಗಿಲ್ಲ ಎಂದು ದೂರಿದರು.

ಕೇವಲ ನಾಲ್ಕು ವರ್ಷಗಳ ಕಾಲ ಸರ್ಕಾರ ಯುವಜನರನ್ನು ಬಳಸಿಕೊಂಡು ನಂತರ ಅವರನ್ನು ಮನೆಗೆ ಕಳಿಸಿದ್ದಲ್ಲಿ ಅವರ ಭವಿಷ್ಯ ಏನಾಗಬೇಕು. ಸಂಸಾರ ಸಾಗಿಸಬೇಕಾದ ಸಂದರ್ಭದಲ್ಲಿ ಅವರು ರಸ್ತೆ ಮೇಲೆ ನಿಲ್ಲಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆ ಹಿಂಪಡೆಯಬೇಕುಟ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ನಂದಿಗ್ರಾಮ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ, ವೆಂಕಟರಾಮರೆಡ್ಡಿ ಕಡತಾಲ, ಹೇಮಾರೆಡ್ಡಿ ಪಾಟೀಲ, ಸತೀಶರೆಡ್ಡಿ ರಂಜೋಳ, ಬಸವರಾಜ ಪಾಟೀಲ ಊಡಗಿ, ಅಶೋಕ ಫಿರಂಗಿ, ದಾಮೋದರರೆಡ್ಡಿ ಪಾಟೀಲ, ಮುಕ್ರಂಖಾನ್, ಜೈಭೀಮ ಊಡಗಿ, ಸಿದ್ದು ಬಾನಾರ್, ರಾಮಯ್ಯ ಪೂಜಾರಿ, ವಿಶ್ವನಾಥ ಪಾಟೀಲ, ಸತ್ತರ ನಾಡೆಪಲ್ಲಿ, ವಿಲಾಸೌತಂ, ವೆಂಕಟರಾಮರೆಡ್ಡಿ ಹೈಯ್ಯಾಳ, ಜಗನ್ನಾಥ ಚಿಂತಪಳ್ಳಿ, ಅನಂತಯ್ಯ ಮುಸ್ತಾಜರ್, ಚನ್ನಬಸ್ಸಪ್ಪ ಹಾಗರಗಿ, ರಾಜಶೇಖರ ಪುರಾಣಿಕ್, ರವಿ ಸಾಹು ತಂಬಾಕೆ, ಸದಾಶಿವರೆಡ್ಡಿ ಗೋಪನಪಲ್ಲಿ, ಹೇಮ್ಲಾನಾಯಕ, ಸಂತೋಷ ಕುಲಕರ್ಣಿ, ನಾಗಕುಮಾರ ಎಳ್ಳಿ, ಸೈಯದ್ ನಾಜಿಮೋದ್ದಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT