ಮಂಗಳವಾರ, ಸೆಪ್ಟೆಂಬರ್ 21, 2021
20 °C

ಶೇಂಗಾ ಬೆಳೆಗೆ ತಾಮ್ರ, ಎಲೆ ಚುಕ್ಕಿ ‌ರೋಗ: ಇಳುವರಿ ಕುಂಠಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ತಾಲ್ಲೂಕಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಶೇಂಗಾ ಬೆಳೆಗೆ ಇದೀಗ ತಾಮ್ರ ರೋಗ ಹಾಗೂ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದ್ದು, ಶೇಂಗಾ ಬೆಳವಣಿಗೆ ಕುಂಠಿತವಾಗಿರುವುದು ರೈತರು ಚಿಂತೆ ಮಾಡುವಂತಾಗಿದೆ.

ಸದ್ಯಕ್ಕೆ ಶೇಂಗಾ ಕಾಯಿಕಟ್ಟುವ ಹಂತದಲ್ಲಿದ್ದು ರೋಗ ಕಾಣಿಸಿಕೊಂಡಿದ್ದರಿಂದ ಕಾಯಿಗಳ ಸಂಖ್ಯೆ ಕಡಿಮೆಯಾಗುತ್ತದೆ ಮತ್ತು ಕಾಯಿಗಳು ಹೆಚ್ಚು ಗಟ್ಟಿ ಆಗುವುದಿಲ್ಲ ಎಂದು ಶೇಂಗಾ ಬೆಳೆಗಾರರು ಹೇಳುತ್ತಾರೆ. ಮಳೆ ಪ್ರಮಾಣ ಅಧಿಕವಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗುವುದರಿಂದ ಎಲೆಗಳು ಹಳದಿ ಆಗುತ್ತವೆ ಮತ್ತು ಎಲೆಗಳು ಕೆಂಪಾಗುತ್ತವೆ. ಅದಕ್ಕಾಗಿ ರೈತರು 19:19:19 ಗೊಬ್ಬರವನ್ನು ಸಿಂಪರಣೆ ಮಾಡಬೇಕು, ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ಅಲ್ಲಿಯ ಅಧಿಕಾರಿಗಳು ತಿಳಿಸಿದರು .

‘ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಹಂಗಾಮಿಗೆ ಬೆಳೆ ನಿರ್ವಹಣೆ ಕುರಿತು ಬೇಸಿಗೆಯಲ್ಲಿ ರೈತರಿಗೆ ತರಬೇತಿ ವ್ಯವಸ್ಥೆಯನ್ನು ಮಾಡಬೇಕು . ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಕೃಷಿ ಇಲಾಖೆಯಲ್ಲಿ ಸಿಬ್ಬಂದಿಗಳು ಇರುವುದಿಲ್ಲ. ಯಾವ ಕೃಷಿ ಸಾಯಕರೂ ಗ್ರಾಮಗಳಿಗೆ ಬರುವುದಿಲ್ಲ. ಒಂದು ದಿನವೂ ರೈತರಿಗೆ ಸಲಹೆ ನೀಡಿಲ್ಲ’ ಎಂದು ರೈತ ಮುಖಂಡರಾದ ಸಿದ್ದರಾಮ್ ದಣ್ಣೂರು ಶಿವು ಪ್ಯಾಟಿ ಹಾಗೂ ಸಂತೋಷ ಗಂಜಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು