ಸೋಮವಾರ, ಜೂನ್ 14, 2021
21 °C

ಕೊರೊನಾ: 21 ಮಂದಿ ಸಾವು, 929 ಪಾಸಿಟಿವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೊರೊನಾ ಸೋಂಕಿನಿಂದಾಗಿ ಜಿಲ್ಲೆಯಲ್ಲಿ 21 ಜನ ಮೃತಪಟ್ಟಿದ್ದಾರೆ ಎಂದು ಶುಕ್ರವಾರದ ಬುಲೆಟಿನ್‌ ತಿಳಿಸಿದೆ. ಇದರೊಂದಿಗೆ ಒಟ್ಟು ಮೃತಪಟ್ಟವರ ಸಂಖ್ಯೆ 612ಕ್ಕೆ ಏರಿಕೆಯಾಗಿದೆ.

ನಗರದವರು: ಗಂಜ್‌ ಪ್ರದೇಶದ 63 ವರ್ಷದ ಪುರುಷ, ಸಿಐಬಿ ಕಾಲೊನಿಯ 50 ವರ್ಷದ ಮಹಿಳೆ, ರಾಮತೀರ್ಥ ಪ್ರದೇಶದ 43 ವರ್ಷದ ಮಹಿಳೆ, ಶಿವಾಜಿ ನಗರದ 50 ವರ್ಷದ ಪುರುಷ, ತೇಲ್ಕರ್‌ ಕಾಲೊನಿಯ 61 ವರ್ಷದ ಮಹಿಳೆ, ಸಿದ್ಧಗಂಗಾ ನಗರದ 55 ವರ್ಷದ ಪುರುಷ, ವಿಠಲ ನಗರದ 74 ವರ್ಷದ ಪುರುಷ, ಸಾಯಿರಾಮ್‌ ನಗರದ 52 ವರ್ಷದ ಮಹಿಳೆ, ಮಿಸ್ಬಾನಗರದ 45 ವರ್ಷದ ಪುರುಷ, ಸಾಯಿ ಮಂದಿರ ಪ್ರದೇಶದ 37 ವರ್ಷದ ಇನ್ನೊಬ್ಬ ಪುರುಷ, 60 ವರ್ಷದ ಇನ್ನೊಬ್ಬ ಮಹಿಳೆ, ಮಹಾವೀರ ನಗರದ 84 ವರ್ಷದ ಪುರುಷ, ಪ್ರಗತಿ ಕಾಲೊನಿಯ 80 ವರ್ಷದ ವೃದ್ಧ, ರಾಜಾಪುರ ಪ್ರದೇಶದ 75 ವರ್ಷದ ಇನ್ನೊಬ್ಬ ವೃದ್ಧ ಮೃತಪಟ್ಟಿದ್ದಾರೆ.

ಗ್ರಾಮೀಣ ಪ್ರದೇಶದವರು: ಆಳಂದ ತಾಲ್ಲೂಕು ಭೂಸನೂರಿನ 46 ವರ್ಷದ ಮಹಿಳೆ, ಜೇವರ್ಗಿ ತಾಲ್ಲೂಕು ಕೆಲ್ಲೂರು ಗ್ರಾಮದ 72 ವರ್ಷದ ಮಹಿಳೆ, ಸೇಡಂ ಪಟ್ಟಣದ 70 ವರ್ಷದ ಇನ್ನೊಬ್ಬ ಮಹಿಳೆ, ಚಿತ್ತಾಪುರ ತಾಲ್ಲೂಕು ವಾಡಿಯ 39 ವರ್ಷದ ಪುರುಷ, ಸೇಡಂ ತಾಲ್ಲೂಕು ಬೀರನಹಳ್ಳಿಯ 35 ವರ್ಷದ ಪುರುಷ, ತೆಳಗೇರಿಯ 56 ವರ್ಷದ ಮಹಿಳೆ, ಅಫಜಲಪುರ ತಾಲ್ಲೂಕಿನ ಅತನೂರಿನ 50 ವರ್ಷದ ಮಹಿಳೆ ಕೊರೊನಾದಿಂದ ಸಾವನ್ನಪ್ಪಿದವರು.

929 ಮಂದಿಗೆ ಪಾಸಿಟಿವ್‌: ಇನ್ನೊಂದೆಡೆ 929 ಮಂದಿಗೆ ಹೊಸದಾಗಿ ವೈರಾಣು ಅಂಟಿಕೊಂಡಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 54,516ಕ್ಕೆ ಏರಿಕೆಯಾಗಿದೆ. ಅದೇ ರೀತಿ, 679 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇವರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 38,068ಕ್ಕೆ ಏರಿಕೆಯಾಗಿದೆ. ಇನ್ನೂ 15,836 ಸಕ್ರಿಯ ಪ್ರಕರಣಗಳು ಇವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.