ಶನಿವಾರ, ಜೂನ್ 12, 2021
24 °C

ಕಲಬುರ್ಗಿ: ಹಸಿ ಬಾಣಂತಿಯನ್ನು ಮನೆ ತಲುಪಿಸಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಒಂದೇ ದಿನ ವಯಸ್ಸಿನ ಹಸುಗೂಸನ್ನು ಕಂಕುಳಲ್ಲಿ ಎತ್ತಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದ ಹಸಿಬಾಣಂತಿಯನ್ನು, ನಗರದ ಪೊಲೀಸರು ಮನೆಗೆ ತಲುಪಿಸಿದರು.

ಇಲ್ಲಿನ ಗಂಜ್‌ ಪ್ರದೇಶದ ಆಸ್ಪತ್ರೆಯಲ್ಲಿ ಮಹಿಳೆಗೆ ಬುಧವಾರ ಹೆರಿಗೆ ಆಗಿದ್ದು, ಗುರುವಾರ ಬೆಳಿಗ್ಗೆ ಅವರು ಆಸ್ಪತ್ರೆಯಿಂದ ಬಿಡುಗಡೆ ಆದರು. ಆಸ್ಪತ್ರೆಯ ಆಂಬುಲೆನ್ಸ್‌ ಸಿಗದೆ, ಆಟೊಗಳೂ ಇರದ ಕಾರಣ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಅವರೊಂದಿಗೆ ಹಸುಳೆಯನ್ನು ಎತ್ತಿಕೊಂಡ ಇನ್ನೊಬ್ಬ ಮಹಿಳೆ ಇದ್ದರು. ಇವರನ್ನು ನೋಡಿದ ವ್ಯಕ್ತಿಯೊಬ್ಬರು ಸರ್ಕಲ್‌ನಲ್ಲಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ಗೆ ಮಾಹಿತಿ ನೀಡಿದರು.‌

ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಸಂಚಾರ ಠಾಣೆ–2ರ ಕಾನ್‌ಸ್ಟೆಬಲ್‌ ರಾಜಕುಮಾರ ಅವರು, ಮಹಿಳೆ ಹಾಗೂ ಬಾಣಂತಿಯನ್ನು ನೆರಳಿಗೆ ಕೂಡಿಸಿ ಉಪಚರಿಸಿದರು. ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಕಾರ್‌ ನಿಲ್ಲಿಸಿ, ಬಾಣಂತಿಯನ್ನು ಸುರಕ್ಷಿತವಾಗಿ ಮನೆಗೆ ಬಿಡುವಂತೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಕಾರ್‌ ಚಾಲಕ ಅವರನ್ನು ಫಿಲ್ಟರ್‌ಬೆಡ್‌ ಪ್ರದೇಶದಲ್ಲಿರುವ ಬಾಣಂತಿಯ ಮನೆಗೆ ತಲುಪಿಸಿ ಮಾನವೀತೆ ಮೆರೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು