ಭಾನುವಾರ, ಸೆಪ್ಟೆಂಬರ್ 19, 2021
31 °C

ಚಿಂಚೋಳಿ: ಶಾಸಕರ ಕಾರ್ಯಾಲಯದ ಮುಂದೆ ಬಿಜೆಪಿ ಮುಖಂಡನ ಧರಣಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಪೋಲಕಪಳ್ಳಿ ಗ್ರಾಮ ಪಂಚಾಯಿತಿಯ ದುರಾಡಳಿತ, ಭ್ರಷ್ಟಾಚಾರ ವಿರೋಧಿಸಿ ಹಾಗೂ ಮೂಲಸೌಕರ್ಯಗಳು ಒದಗಿಸಲು ಒತ್ತಾಯಿಸಿ ಗ್ರಾ.ಪಂ ಮಾಜಿ ಸದಸ್ಯರೂ ಆಗಿರುವ ಬಿಜೆಪಿ ಮುಖಂಡ, ವಕೀಲ ನಂದಿಕುಮಾರ ಪಾಟೀಲ ಇಲ್ಲಿನ ಚಂದಾಪುರದಲ್ಲಿರುವ ಶಾಸಕ ಕಾರ್ಯಾಲಯದ ಎದುರಿಗೆ ಏಕಾಂಗಿ ಧರಣಿ ನಡೆಸುತ್ತಿದ್ದಾರೆ.

ಶನಿವಾರ ಬೆಳಿಗ್ಗೆಯಿಂದಲೇ ಧರಣಿ ಕುಳಿತ ನಂದಿಕುಮಾರ ಪಾಟೀಲ, ಈ ಹಿಂದೆ ಏಕಾಂಗಿಯಾಗಿ ಪಂಚಾಯಿತಿ ಎದುರು ಧರಣಿ ನಡೆಸಿದ್ದರು. ಇದಕ್ಕೆ ಜನ ಬೆಂಬಲವೂ ವ್ಯಕ್ತವಾಗಿತ್ತು. ಆಗ  ಅಧಿಕಾರಿಗಳು ನೀಡಿದ ಭರವಸೆ ಈಡೇರಿಲ್ಲ. 

ಬೇಡಿಕೆಗಳ ಕುರಿತು ಮೇಲಿಂದ ಮೇಲೆ ಶಾಸಕ ಡಾ. ಅವಿನಾಶ ಜಾಧವ ಹಾಗೂ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೂ ಬೇಡಿಕೆಗಳ ಪತ್ರ ಸಲ್ಲಿಸಲಾಗಿದೆ. ಆದರೆ ಶಾಸಕರಿಂದ ಮನವಿ ಪತ್ರಕ್ಕೆ ಸ್ಪಂದನೆ ಸಿಕ್ಕಿಲ್ಲ ಸಂಸದರು ಅರ್ಜಿಯನ್ನು ಜಿ.ಪಂ ಸಿಇಒ ಅವರಿಗೆ ಕಳುಹಿಸಿ ಸೂಕ್ತ ಕ್ರಮಕ್ಕೆ ಕೋರಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ದಾರಿ ಕಾಣದೇ ಮತ್ತೆ ಶಾಸಕರಿಗೆ ಪತ್ರ ಕಳುಹಿಸಿ ನಾಗರಿಕರ ಕುಂದುಕೊರತೆಗಳು ಹಾಗೂ ಪಂಚಾಯಿತಿ ಅವ್ಯವಹಾರ ಹಿನ್ನೆಲೆ ಸೂಕ್ತ  ಕ್ರಮಕ್ಕೆ ಒತ್ತಾಯಿಸಿ ಧರಣಿ ಕುಳಿತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು