ಸೋಮವಾರ, ಜೂನ್ 14, 2021
26 °C

ಕಲಬುರ್ಗಿ| ಕೋವಿಡ್‌ನಿಂದ ತಂದೆ, ತಾಯಿ, ಪುತ್ರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೊರೊನಾ ಸೋಂಕು ತಗುಲಿದ್ದ ತಂದೆ– ಮಗ ಒಂದೇ ದಿನ ಸಾವನ್ನಪ್ಪಿದ್ದರೆ, ತಾಯಿ ಕೂಡ 15 ದಿನದ ಹಿಂದೆ ತೀರಿಕೊಂಡಿದ್ದಾರೆ. ಎರಡೇ ವಾರಗಳಲ್ಲಿ ತಂದೆ– ತಾಯಿ– ಮಗ ಮೂವರೂ ಸೋಂಕಿನಿಂದ ಸಾವನ್ನಪ್ಪಿದ್ದು ಕುಟುಂಬ ತತ್ತರಿಸಿಹೋಗಿದೆ.

ಕಲಬುರ್ಗಿಯ ಮಹಾ ಭೀಮಾನಗರದ ನಿವಾಸಿ ಶ್ರೀಪತರಾವ್‌ ಬಡಿಗೇರ (66) ಅವರು ಗುರುವಾರ ಬೆಳಿಗ್ಗೆ ನಗರದ ಮೋಹನರಾಜ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅದೇ ದಿನ ಸಂಜೆ ಅವರ ಪುತ್ರ ಮೌನೇಶಕುಮಾರ (41) ಕೂಡ ಸಾವನ್ನಪ್ಪಿದರು. ಮೌನೇಶಕುಮಾರ ಅವರ ತಾಯಿ ಕೂಡ ಕೇವಲ 15 ದಿನಗಳ ಹಿಂದೆ ಕೊರೊನಾ ಸೋಂಕಿನಿಂದಾಗಿಯೇ ಮೃತಪಟ್ಟಿದ್ದಾರೆ. ಇಡೀ ಕುಟುಂಬದಲ್ಲಿ ಈಗ ಮೌನೇಶಕುಮಾರ ಅವರ ಪತ್ನಿ ಹಾಗೂ ಅವರ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಮಾತ್ರ ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು