‘ನನ್ನ ಅವಧಿಯಲ್ಲೇ ಜಿ.ಪಂ. ತಾ.ಪಂ. ಚುನಾವಣೆ’
‘ಕ್ಷೇತ್ರಗಳ ಮರು ವಿಂಗಡಣೆ ಪ್ರಯುಕ್ತ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣೆಗಳು ವಿಳಂಬವಾಗಿದ್ದು ನಾನು ಗ್ರಾಮೀಣಾಭಿವೃದ್ದಿ ಪಂಚಾಯತರಾಜ್ ಸಚಿವನಾಗಿರುವ ವೇಳೆಯೇ ಚುನಾವಣೆಗಳನ್ನು ನಡೆಸುವುದು ನಿಶ್ಚಿತ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಕೆಲ ಗ್ರಾಮಗಳು ನಗರದ ವ್ಯಾಪ್ತಿಗೆ ಸೇರಿದ್ದರಿಂದ ಪುನರ್ ವಿಂಗಡಣೆ ಮಾಡುವುದಕ್ಕೆ ಸಮಯ ಬೇಕಾಗಿತ್ತು ಎಂದು ಸ್ಪಷ್ಟಪಡಿಸಿದರು. ‘ಪಿಡಿಒಗಳ ಕೊರತೆ ನೀಗಿಸಲು ಕೆಪಿಎಸ್‌ಸಿ ಮೂಲಕ ಪರೀಕ್ಷೆ ನಡೆಸಿದ್ದು ತಪ್ಪು ಎಂದು ಈಗ ಅರಿವಾಗುತ್ತಿದೆ. ಯಾವುದಾದರೂ ಕೆಲಸ ಆಗಬಾರದು ಎಂದರೆ ಕೆಪಿಎಸ್‌ಸಿಗೆ ವಹಿಸಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿದ್ದರೆ ಈಗಾಗಲೇ ನೇಮಕಾತಿ ಪ್ರಕ್ರಿಯೆ ಮುಗಿಯುತ್ತಿತ್ತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.