ಕಲಬುರಗಿ: ‘ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿನಿ ಜಯಶ್ರೀ ನಾಯಕ್ ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ.ಸಾಗರ ಆಗ್ರಹಿಸಿದರು.

‘ಯುವತಿಯ ಸಾವಿನ ಹಿಂದಿರುವ ಕಾಣದ ಕೈಗಳು ಯಾವವು? ಆತ್ಮಹತ್ಯೆ ಆಗಿದ್ದರೆ ಅದರ ಹಿಂದಿನ ಕಾರಣಗಳೇನು ಎಂಬುದನ್ನು ನಿಖರವಾಗಿ ಪತ್ತೆ ಮಾಡಬೇಕು’ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲೇ ಈ ಸಾವು ನಡೆದಿದೆ. ಆ ಸಾವಿಗೆ ವಿಶ್ವವಿದ್ಯಾಲಯದ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಕುಲಪತಿ, ಕುಲಸಚಿವರು, ವಿದ್ಯಾರ್ಥಿ ಕಲ್ಯಾಣ ಅಧಿಕಾರಿಗಳೆಲ್ಲ ಹೊಣೆಗಾರರಾಗುತ್ತಾರೆ. ರಾಜ್ಯ ಸರ್ಕಾರ ಕೂಡಲೇ ಇವರನ್ನು ವಿಚಾರಣೆಗೆ ಒಳಪಡಿಸಬೇಕು. ಯಾವ ಶೋಷಣೆಯಿಂದ ವಿದ್ಯಾರ್ಥಿನಿಯ ಸಾವು ಸಂಭವಿಸಿದೆ ಎಂಬುದನ್ನು ಪತ್ತೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಕಡಂಗಚಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಯಾದಾಗ ಕಲ್ಯಾಣ ಭಾಗದ ಜನರು ಈ ಭಾಗದ ಶೈಕ್ಷಣಿಕ ಶಕ್ತಿಯಾಗಲಿದೆ ಎಂದು ಆಸೆಗಣ್ಣಿನಿಂದ ನೋಡಿದ್ದರು. ರಾಷ್ಟ್ರಕಟ್ಟುವ, ಸಮಸಮಾಜ ನಿರ್ಮಿಸುವ ಶಿಸ್ತಿನ ನಾಗರಿಕರನ್ನು, ಭವಿಷ್ಯದ ನಾಯಕರನ್ನು ರೂಪಿಸಬೇಕಾದ ಕೇಂದ್ರೀಯ ವಿಶ್ವವಿದ್ಯಾಲಯವು ಇತ್ತೀಚೆಗೆ ನಕಾರಾತ್ಮಕ ಸಂಗತಿಗಳಿಂದ ಸುದ್ದಿಯಲ್ಲಿದೆ. ಪ್ರೊ.ಬಟ್ಟು ಸತ್ಯನಾರಾಯಣ ಅವರು ಕುಲಪತಿಯಾದಾಗಿನಿಂದ ವಿ.ವಿ ಆವರಣದಲ್ಲಿ ಕೋಮುವಾದ, ಜಾತಿವಾದ ತಲೆ ಎತ್ತಿದೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.