ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರದ ಕಾಗಿಣಾ ನದಿಗೆ ಕಟ್ಟಿರುವ ಸೇತುವೆಯ ಮೇಲಿನ ರಸ್ತೆ ಪ್ರವಾಹದಲ್ಲಿ ಶುಕ್ರವಾರ ಕಿತ್ತು ಹೋಗಿದೆ.

ಸೇತುವೆ ಮೇಲಿನ ಡಾಂಬರ್ ರಸ್ತೆ ಮತ್ತು ಸಿಮೆಂಟ್ ಕಾಂಕ್ರಿಟ್ ರಸ್ತೆ ಕಿತ್ತು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ.

ಗುರುವಾರ ದಿನವಿಡೀ ಪ್ರವಾಹದಲ್ಲಿ ಸೇತುವೆ ಮುಳುಗಿತ್ತು. ಶುಕ್ರವಾರ ಬೆಳಿಗ್ಗೆ ಪ್ರವಾಹ ಕಡಿಮೆಯಾದಾಗ ಸೇತುವೆ ಮೇಲಿನ ರಸ್ತೆ ಕಿತ್ತು ಹೋಗಿರುವುದು ಬೆಳಕಿಗೆ ಬಂದಿದೆ.

ಸೇತುವೆ ಮೇಲಿನ ಅನೇಕ ಸಿಮೆಂಟ್ ಕಂಬಗಳು ಕೊಚ್ಚಿಕೊಂಡು ಹೋಗಿವೆ. ಸೇತುವೆ ಮೇಲೆ ಅಳವಡಿಸಿದ ಮೊಬೈಲ್ ನೆಟ್ವರ್ಕ್ ಕೇಬಲ್ ಕಿತ್ತು ಹೋಗಿದೆ.

ಸೇತುವೆ ಹದಗೆಟ್ಟಿದ್ದರಿಂದ ದಂಡೋತಿ ಸೇತುವೆ ಮಾರ್ಗವಾಗಿ ಕಲಬುರಗಿ, ಸೇಡಂಗೆ ನಿತ್ಯ ಸಂಚರಿಸುತ್ತಿದ್ದ ಬಸ್ಗಳು ಶಹಾಬಾದ್ ಮತ್ತು ಮಳಖೇಡ ಮಾರ್ಗವಾಗಿ ಸಂಚರಿಸುತ್ತಿವೆ.

ಕಲಬುರಗಿ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.