ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ತೆಲ್ಕೂರಗೆ ಅಧ್ಯಕ್ಷ ಪಟ್ಟ; ಕಾಂಗ್ರೆಸ್ ಬೆಂಬಲಿತ ಮೂವರು ನಿರ್ದೇಶಕರ ಅನರ್ಹತೆ

ಕಲಬುರ್ಗಿ–ಯಾದಗಿರಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಚುನಾವಣೆ
Last Updated 8 ಜನವರಿ 2021, 21:35 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ–ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ) ಅಧ್ಯಕ್ಷರ ಚುನಾವಣೆ ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಮೂರು ದಿನಗಳ ಹಿಂದಷ್ಟೇ ಬ್ಯಾಂಕ್‌ ನಿರ್ದೇಶಕರಾಗಿ ಸರ್ಕಾರದಿಂದ ನಾಮ ನಿರ್ದೇಶನಗೊಂಡಿದ್ದ ಸೇಡಂ ಶಾಸಕ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಜಕುಮಾರ ‌ಪಾಟೀಲ ತೆಲ್ಕೂರ ಅಧ್ಯಕ್ಷರಾಗಿ ಆಯ್ಕೆಯಾದರು.

ಸಾಲ ಮರುಪಾವತಿಸಿಲ್ಲ ಎಂಬುದು ಸೇರಿದಂತೆ ಸಹಕಾರ ಸಂಘಗಳ ನಿಯಮಗಳನ್ನು ಉಲ್ಲಂಘಿಸಿದ ಕಾರಣ ನೀಡಿ ಕಾಂಗ್ರೆಸ್‌ ಬೆಂಬಲಿತ ಮೂವರು ನಿರ್ದೇಶಕರನ್ನು ಸಹಕಾರ ಸಂಘಗಳ ಜಂಟಿ ನಿಬಂಧಕರು ಅನರ್ಹಗೊಳಿಸಿದ ಪತ್ರವನ್ನು, ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ನಡೆಯುವ ಕೆಲ ಹೊತ್ತಿನ ಮೊದಲು ಆ ಮೂವರಿಗೆ ನೀಡಲಾಯಿತು.

ಅಧಿಕಾರ ದುರುಪಯೋಗ: ‘ನಮ್ಮನ್ನು ರಾತ್ರೋರಾತ್ರಿ ‌ಅನರ್ಹಗೊಳಿಸುವ ಮೂಲಕ ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ.‌ ಶಾಸಕರು ಅಧ್ಯಕ್ಷರಾಗಿ ಆಯ್ಕೆಯಾಗಲು ವಾಮಮಾರ್ಗ ತುಳಿಯಲಾಗಿದೆ’ ಎಂದು ಅನರ್ಹ ನಿರ್ದೇಶಕ, ಕಾಂಗ್ರೆಸ್ ಮುಖಂಡ ಸೋಮಶೇಖರ ‌ಗೋನಾಯಕದೂರಿದರು.

‘ಸಾಲವನ್ನು ಮರುಪಾವತಿ ಮಾಡದ್ದಕ್ಕೆ ನಿರ್ದೇಶಕರನ್ನು ಅನರ್ಹ ಮಾಡುವುದಾಗಿದ್ದರೆ ಹಿಂದಿನ ಅವಧಿಯಲ್ಲಿದ್ದ ಎಲ್ಲ ನಿರ್ದೇಶಕರನ್ನೂ ಅನರ್ಹಗೊಳಿಸಬೇಕಿತ್ತು. ಹಾಗೇಕೆ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.

ಸಮಜಾಯಿಷಿ: ‘ಬಿಜೆಪಿ ಬೆಂಬಲಿತ ನಾಲ್ವರು ‌ನಿರ್ದೇಶಕರು ಆಯ್ಕೆಯಾಗಿದ್ದರು. ಉಳಿದ ನಿರ್ದೇಶಕರೂ ಬೆಂಬಲಿಸುವ ‌ಮೂಲಕ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಇಲ್ಲಿ ಪಕ್ಷದ ಆಧಾರದ ಮೇಲೆ ಚುನಾವಣೆ ನಡೆದಿಲ್ಲ. ಹೀಗಾಗಿ ಇದು ಆಪರೇಷನ್ ಕಮಲ ಆಗುವುದಿಲ್ಲ’ಎಂದುತೆಲ್ಕೂರ‌ ಸಮಜಾಯಿಷಿ ನೀಡಿದರು.

‘ಮೂವರು ನಿರ್ದೇಶಕರು ಸಹಕಾರ ಸಂಘಗಳ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಅವರನ್ನು ಅನರ್ಹರನ್ನಾಗಿಸಲಾಗಿದೆ. ಇದರಲ್ಲಿ ಸರ್ಕಾರ ‌ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ’ ಎಂದೂ ಅವರು ಹೇಳಿದರು.

ಆಡಳಿತ ಮಂಡಳಿಯ ಒಟ್ಟು 16 ನಿರ್ದೇಶಕರ ಪೈಕಿ, ಮೂವರು ಸರ್ಕಾರದ ಪ್ರತಿನಿಧಿಗಳು. ಉಳಿದ 13 ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತ 9 ಹಾಗೂ ಬಿಜೆಪಿ ಬೆಂಬಲಿತ ನಾಲ್ವರು ನಿರ್ದೇಶಕರು ನ.29ರಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಕಾಂಗ್ರೆಸ್‌ ಬೆಂಬಲಿತ ಇಬ್ಬರು ನಿರ್ದೇಶಕರು ಶಾಸಕ ತೆಲ್ಕೂರ ಅವರನ್ನು ಬೆಂಬಲಿಸಿದರೆ, ಉಳಿದ ನಾಲ್ವರು ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರು ತಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿ ಪರ ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT