ಕಲಬುರಗಿಯ ಸೂಪರ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿರುವ ವಿವಿಧ ತಳಿಯ ಮಾವು
ಇನ್ನೊಂದು ವಾರದಲ್ಲಿ ಹೆಚ್ಚು ಆವಕದ ನಿರೀಕ್ಷೆ ಇದೆ. ಬಹಳ ಕಾಯಿ/ ಹಣ್ಣುಗಳು ಬಂದರೆ ಬೆಲೆ ಇಳಿಕೆಯಾಗಬಹುದು. ಆಪುಸ್‌ಗೆ ಹೆಚ್ಚಿನ ಬೇಡಿಕೆ ಇದೆ
ಸಿರಾಜ್ ಮಾವಿನ ಹಣ್ಣುಗಳ ಸಗಟು ವ್ಯಾಪಾರಿ
ಚಿಂಚೋಳಿ ತಾಲ್ಲೂಕಿನಲ್ಲಿ ಬೆಳೆದ ಹಣ್ಣುಗಳು ಆಂಧ್ರ ತೆಂಲಗಾಣಕ್ಕೆ ಹೋಗುತ್ತವೆ. ಆಪೂಸ್‌ಗೆ ಹೆಚ್ಚು ಬೇಡಿಕೆಯಿದ್ದು ಧಾರವಾಡ ಬೆಳಗಾವಿಯಿಂದ ಹಣ್ಣುಗಳು ಬರುತ್ತವೆ
ಸಂತೋಷ ಇನಾಮದಾರ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ
ಚಿಂಚೋಳಿಯಲ್ಲೇ ಹೆಚ್ಚು
ಜಿಲ್ಲೆ ವ್ಯಾಪ್ತಿಯ ಒಟ್ಟು 400 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ಬೆಳೆ ಇದೆ. ಇದರಲ್ಲಿ 250 ಹೆಕ್ಟೇರ್‌ನಲ್ಲಿ ಇಳುವರಿ ಬರುತ್ತದೆ. ಚಿಂಚೋಳಿ ವ್ಯಾಪ್ತಿಯಲ್ಲೇ ಹೆಚ್ಚು ಮಾವಿನ ಬೆಳೆ ಇದೆ. ‘ಚಿಂಚೋಳಿ ಮುಕ್ತಂಪುರ ಪ್ರದೇಶದಲ್ಲಿ ಹೆಚ್ಚು ಮಾವು ಬೆಳೆಯಲಾಗಿದೆ. ಆಂಧ್ರದ ರೈತರು ಹೆಚ್ಚಿನ ಪ್ರದೇಶದಲ್ಲಿ ಮಾವಿನ ಕೃಷಿಯಲ್ಲಿ ತೊಡಗಿದ್ದಾರೆ. ಬಿಸಿಲಿನ ವಾತಾವರಣದಲ್ಲಿ ಕೇಸರಿ ತಳಿಯ ಮಾವು ಉತ್ತಮವಾಗಿ ಬೆಳೆಯುವುದರಿಂದ ನಾವು ಅದನ್ನೇ ಹೆಚ್ಚು ಪ್ರೋತ್ಸಾಹಿಸುತ್ತಿದ್ದೇವೆ. ಬಂಗನಪಲ್ಲಿ ತಳಿಯನ್ನೂ ಚಿಂಚೋಳಿ ಸೀಮೆಯಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ಆಂಧ್ರದ ಬೆಳೆಗಾರರು ಮತ್ತು ವ್ಯಾಪಾರಿಗಳ ಮಧ್ಯೆ ಮಾರುಕಟ್ಟೆ ಸರಳಿಪಳಿ ಇರುವುದರಿಂದ ನಮ್ಮ ಜಿಲ್ಲೆಯಲ್ಲಿ ಈ ಇಳುವರಿ ಮಾರಾಟಕ್ಕೆ ಬರುವುದಿಲ್ಲ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂತೋಷ ಇನಾಮದಾರ ತಿಳಿಸಿದರು.