ಮಂಗಳವಾರ, ಏಪ್ರಿಲ್ 20, 2021
27 °C

ಆಟೊ ಚಾಲಕರಿಗೆ ಮನೆ ನಿರ್ಮಿಸಿಕೊಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸತತ ತೈಲ ಬೆಲೆ ಏರಿಕೆ, ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಳದಿಂದ ಸಂಕಷ್ಟದಲ್ಲಿರುವ ಆಟೊ ಚಾಲಕರಿಗೆ ಮಹಾನಗರ ಪಾಲಿಕೆ ನಿವೇಶನ ಖರೀದಿಸಿ ಮನೆ ಕಟ್ಟಿಸಿಕೊಡಬೇಕು ಎಂದು ಆಗ್ರಹಿಸಿ ಎಐಯುಟಿಯುಸಿ ಕಾರ್ಮಿಕ ಸಂಘಟನೆ ಸಂಯೋಜಿತ ಆಟೊ ಚಾಲಕರ ಸಂಘದ ಸದಸ್ಯರು ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರಿಗೆ ಮನವಿ ಸಲ್ಲಿಸಿದರು.

ನಗರದಲ್ಲಿ ಆಟೊ ನಿಲ್ದಾಣಗಳು ಸಾಕಷ್ಟು ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಹಾಗೂ ಚಾಲಕರಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಸರ್ಕಾರದ ವತಿಯಿಂದ ಆಟೊ ನಿಲ್ದಾಣ ಸ್ಥಾಪಿಸಿ ಆಟೊಗಳು ಬೀದಿಯ ಮೇಲೆ ನಿಂತುಕೊಳ್ಳುವುದನ್ನು ತಪ್ಪಿಸಿ ಸಾರ್ವಜನಿಕರಿಗೆ, ಚಾಲಕರಿಗೆ ತೊಂದರೆ ಆಗದ ಹಾಗೆ ನೋಡಿಕೊಳ್ಳಬೇಕು. ಸರ್ಕಾರದಿಂದ ಚಾಲಕರಿಗೆ ಸೌಲಭ್ಯ ಕೊಡುವುದರೊಂದಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಹಾಗೂ ಮಹಾನಗರ ಪಾಲಿಕೆಯ ವತಿಯಿಂದ ವಿವಿಧ ಸೌಲಭ್ಯಗಳನ್ನು ಚಾಲಕರಿಗೆ ದೊರಕಿಸಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. 

ಸಂಘದ ಗೌರವಾಧ್ಯಕ್ಷ ಪ್ರಭುದೇವ ಯಳಸಂಗಿ, ಅಧ್ಯಕ್ಷ ಮಷಾಕ್ ಪಟೇಲ್, ಮುಖಂಡರಾದ ಮಹ್ಮದ್ ಹುಸೇನ್ ಮೆಕ್ಯಾನಿಕ್ ಚಿಟಗುಪ್ಪಿಕರ, ಎಚ್.ಎಸ್ ಪತಕಿ, ಹಣಮಂತರಾಯ ಅಟ್ಟೂರ, ಕಲ್ಯಾಣಿ ತುಕ್ಕಾಣಿ, ಮಹ್ಮದ್ ಇಬ್ರಾಹಿಂ, ದಶರಥ ಮಲಕಪ್ಪಾ, ಮಹ್ಮದ್ ತೌಫಿಕ್, ಸೈಯದ್ ಸಜ್ಜಾದ್ ಅಲಿ, ಮಹ್ಮದ್ ಇಸ್ಮಾಯಿಲ್,  ಮಹ್ಮದ್ ರಫೀಕ್ ಈ ಸಂದರ್ಭದಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು