ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವಾದಿ ಮಹಮ್ಮದರ ಬಗ್ಗೆ ಅವಹೇಳನ: ಪ್ರತಿಭಟನೆ

Published : 2 ಸೆಪ್ಟೆಂಬರ್ 2024, 16:19 IST
Last Updated : 2 ಸೆಪ್ಟೆಂಬರ್ 2024, 16:19 IST
ಫಾಲೋ ಮಾಡಿ
Comments

ಶಹಾಬಾದ್: ಪ್ರವಾದಿ ಮಹಮ್ಮದ್ ಮತ್ತು ಇಸ್ಲಾಂ ಧರ್ಮದ ವಿರುದ್ಧ ಪ್ರಚೋದನಾಕಾರಿ ಮತ್ತು ಆಕ್ಷೇಪಾರ್ಹ ಹೇಳಿಕೆಗಾಗಿ ಮಹಾರಾಷ್ಟ್ರದ ಧಾರ್ಮಿಕ ಮುಖಂಡ ರಾಮಗಿರಿ ಮಹಾರಾಜ ವಿರುದ್ಧ ನಗರದಲ್ಲಿ ಮುಸ್ಲಿಂಫೋರಂನಿಂದ ಪ್ರತಿಭಟನೆ ನಡೆಸಲಾಯಿತು.

ನೆಹರು ವೃತ್ತದಲ್ಲಿ ಸೋಮವಾರ ಸೇರಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮೌಲಾನಾ ಕೈಸರ್ ಸಾಬ ರಶಾದಿ, ಮೌಲಾನಾ ಇದಾಯತ ಅಲಿ ಮತ್ತು ಮೌಲಾನಾ ಅಬ್ದುಲ ಖಾದಿರ ಸಾಬ ಮಾತನಾಡಿ, ‘ಪ್ರವಾದಿ ಮೇಲಿನ ನಮ್ಮ ಪ್ರೀತಿ ಅತ್ಯುನ್ನತವಾದದ್ದು, ಮುಸಲ್ಮಾನರು ಎಲ್ಲವನ್ನೂ ಸಹಿಸಿಕೊಳ್ಳುತ್ತೇವೆ. ಆದರೆ ಪ್ರವಾದಿಯವರ ಅಗೌರವ ಸಹಿಸಲು ಸಾಧ್ಯವಿಲ್ಲ. ರಾಮಗಿರಿ ಮಹಾರಾಜರ ಹೇಳಿಕೆಗಳು ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ’ ಎಂದು ಹೇಳಿದರು.

‘ಸುಳ್ಳು ಮಾಹಿತಿ ಹರಡುವ ಮತ್ತು ಉದ್ದೇಶ ಪೂರ್ವಕವಾಗಿ ಇಸ್ಲಾಂ ಧರ್ಮದ ಬಗ್ಗೆ ಜನರನ್ನು ದಾರಿ ತಪ್ಪಿಸುವ ವೆಬ್‌ಸೈಟ್‌ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂತಹ ವೆಬ್‌ಸೈಟ್‌ಗಳಿಗೆ ಕಡಿವಾಣ ಹಾಕಬೇಕು, ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಗ್ರೇಡ್ 2 ತಹಶೀಲ್ದಾರ್ ಗುರುರಾಜ ಸಂಗಾವಿ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಹ್ಮದ ಮಸ್ತಾನ, ಮಹ್ಮದ ಇಮ್ರಾನ, ಅಬ್ದುಲ ಗನಿ ಸಾಬೀರ, ಜಹೀರ ಅಹ್ಮದ ಪಟವೇಗಾರ, ಅಪ್ಸರ ಸೇಠ, ನೂರ ಪಟೇಲ್, ಅಹ್ಮದ ಪಟೇಲ, ಮಹ್ಮದ ಯೂನಷ್, ಮತೀನ ಬಾದಲ, ಅನ್ವರ ಪಾಷಾ, ಮಹ್ಮದ ಮುಬಿನ, ಮಹ್ಮದ ಅಜರುದ್ದೀನ್, ಜಬ್ಬಾರ ಖಾನ, ಫೈಯಾಜ ಪಟೇಲ, ಮಹೇಬೂಬ ಗೋಗಿ, ಇಮ್ರಾನ ದಂಡೋತಿ, ಜಾಕಿರ ಇನಾಮದಾರ ಸೇರಿದಂತೆ ನೂರಾರು ಮುಸ್ಲಿಂ ಸಮುದಾಯದ ಜನರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT