ಕಲಬುರಗಿ: ಅಪರಾಧ ಪತ್ತೆ, ಬಾಂಬ್ ನಿಷ್ಕ್ರಿಯ ದಳ, ಮಾದಕ ವಸ್ತುಗಳನ್ನು ಹುಡುವುದು ಸೇರಿದಂತೆ ಪೊಲೀಸರ ತನಿಖೆಗೆ ಪೂರಕವಾಗಿ ಕೆಲಸ ಮಾಡುವ ಐದು ನಾಯಿಗಳು ಕಲಬುರಗಿ ಪೊಲೀಸ್ ಕಮಿಷನರೇಟ್ನ ಶ್ವಾನ ಪಡೆಗೆ ಸೇರ್ಪಡೆಯಾಗಿದ್ದು, ಸೋಮವಾರ ಅವುಗಳಿಗೆ ನಾಮಕರಣ ಮಾಡಲಾಯಿತು.

ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಅವರು ಈ ನಾಯಿಗಳಿಗೆ ರೀಟಾ, ರೂಬಿ, ಸ್ಪಾರ್ಕಿ, ಸ್ಫೂರ್ತಿ ಹಾಗೂ ಲಿಯೊ ಎಂದು ಹೆಸರಿಟ್ಟರು.

ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆರ್. ಹಿತೇಂದ್ರ ಅವರಿಗೆ ನೂತನ ಶ್ವಾನದಳಕ್ಕೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ್ದ ಹಿತೇಂದ್ರ ಅವರು ಶ್ವಾನಗಳನ್ನು ಕಮಿಷನರೇಟ್ಗೆ ಒದಗಿಸಿದ್ದಾರೆ. ಈ ಶ್ವಾನಗಳು ಬೆಂಗಳೂರಿನ ಆಡುಗೋಡಿಯಲ್ಲಿರುವ ಸಿಎಆರ್ ದಕ್ಷಿಣ ಘಟಕದಲ್ಲಿ 9 ತಿಂಗಳು ತರಬೇತಿ ಪಡೆದು ವಾಪಸಾಗಲಿವೆ.

ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ ನಾಯಕ್, ಎಸಿಪಿಗಳು, ಪೊಲೀಸ್ ಇನ್ಸ್ಪೆಕ್ಟರ್ಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.