ಕಲಬುರ್ಗಿ: ತೀವ್ರ ಹಣಾಹಣಿಯಿಂದ ಕೂಡಿದ ಇಲ್ಲಿನ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ (ಎಚ್ಕೆಇ) ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಡಾ.ಭೀಮಾಶಂಕರ ಬಿಲಗುಂದಿ ಪುನರಾಯ್ಕೆಯಾದರು.

29ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಲಗುಂದಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಸವರಾಜ ಭೀಮಳ್ಳಿ ಅವರನ್ನು 145 ಮತಗಳ ಅಂತರದಿಂದ ಪರಾಭವಗೊಳಿಸಿ, ಗೆಲುವಿನ ನಗೆ ಬೀರಿದರು.

ಬಿಲಗುಂದಿ ಅವರು 624 ಮತಗಳನ್ನು ಪಡೆದರೆ, ಭೀಮಳ್ಳಿ ಅವರು 479 ಮತಗಳನ್ನು ಪಡೆದರು. ನಮೋಶಿ ಅವರಿಗೆ 329 ಮತಗಳು ಬಂದವು.

ಭೀಮಳ್ಳಿ ಬಣದಿಂದ ಸ್ಪರ್ಧಿಸಿದ್ದಡಾ.ಶರಣಬಸಪ್ಪ ಆರ್. ಹರವಾಳ ಉಪಾಧ್ಯಕ್ಷರಾಗಿ ಹಾಗೂ ಅವರದೇ ಬಣದ ಎಂಟು ಜನರು ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾದರು.

ಡಾ.ಹರವಾಳ ಅವರು 807 ಮತಗಳನ್ನು ಪಡೆದು ಚುನಾಯಿತರಾದರು. ಬಿಲಗುಂದಿ ಬಣದ ಡಾ.ಶಿವಾನಂದ ಎಸ್. ದೇವರಮನಿ 357 ಹಾಗೂ ಶಶೀಲ್ ನಮೋಶಿ ಬಣದ ಆರ್.ಎಸ್. ಹೊಸಗೌಡ ಅವರು 221 ಮತಗಳನ್ನು ಪಡೆದು ಪರಾಭವಗೊಂಡರು.

13 ಮಂದಿ ಆಡಳಿತ ಮಂಡಳಿ ಸದಸ್ಯರ ಪೈಕಿ ಭೀಮಳ್ಳಿ ಬಣದ ಮಹಾದೇವಪ್ಪ ರಾಂಪೂರೆ, ಡಾ.ನಾಗೇಂದ್ರ ಎಸ್. ಮಂಠಾಳೆ, ಅರುಣಕುಮಾರ್ ಎಂ. ಪಾಟೀಲ, ವಿನಯ್ ಎಸ್. ಪಾಟೀಲ, ಬಸವರಾಜ ಜೆ. ಖಂಡೇರಾವ್, ಸಾಯಿನಾಥ ಎನ್. ಪಾಟೀಲ, ರಾಯಚೂರಿನ ಎನ್. ಗಿರಿಜಾಶಂಕರ ಹಾಗೂ ಬೀದರ್ನ ರಜನೀಶ್ ಎಸ್.ವಾಲಿ ಚುನಾಯಿತರಾದರು.

ಡಾ. ಭೀಮಾಶಂಕರ ಬಿಲಗುಂದಿ ಬಣದ ಡಾ.ಶರಣಬಸಪ್ಪ ಬಿ. ಕಾಮರಡ್ಡಿ, ಕೈಲಾಸ್ ಬಿ. ಪಾಟೀಲ, ಸೋಮನಾಥ ಸಿ. ನಿಗ್ಗುಡಗಿ, ಡಾ.ಜಗನ್ನಾಥ ಬಿ. ಬಿಜಾಪುರೆ ಹಾಗೂ ಶಶೀಲ್ ನಮೋಶಿ ಬಣದ ಡಾ.ಅನಿಲಕುಮಾರ್ ಪಟ್ಟಣ ಆಯ್ಕೆಯಾದರು.

ಗೆಲುವಿಗೆ ಕಾರಣವೇನು?: ಕೋವಿಡ್ ಸಂದರ್ಭದಲ್ಲಿಯೂ ಸಂಸ್ಥೆಯ ವಿವಿಧ ಶಿಕ್ಷಣ ಸಂಸ್ಥೆಗಳ ನೌಕರರಿಗೆ ವೇತನವನ್ನು ಸಕಾಲಕ್ಕೆ ಬಿಡುಗಡೆ ಮಾಡಲು ಶ್ರಮಿಸಿರುವುದು. ಸಂಸ್ಥೆಯ ಅಧೀನದ ಡಾ. ಮಾಲಕರೆಡ್ಡಿ ಹೋಮಿಯೊಪಥಿ ವೈದ್ಯಕೀಯ ಕಾಲೇಜನ್ನು ಎನ್ಎಎಸಿ ಮತ್ತು ಎನ್ಎಬಿಎಚ್ ಮಾನ್ಯತೆಯಡಿ ನಿರ್ಮಿಸಿದ್ದು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮತ್ತು ಮಹತ್ವದ ಕಾರ್ಯಗಳು ಕೈಗೊಂಡಿದ್ದು ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ನಮೋಶಿ ಬಣದ ಕಳಪೆ ಸಾಧನೆ
ಎಚ್ಕೆಇ ಸೊಸೈಟಿ ಮಾಜಿ ಅಧ್ಯಕ್ಷ ಶಶೀಲ್ ನಮೋಶಿ ಅವರ ಬಣದ ಸಾಧನೆ ಈ ಚುನಾವಣೆಯಲ್ಲಿ ಹೇಳಿಕೊಳ್ಳುವಂತಿಲ್ಲ. ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿಯೇ ಎಚ್ಕೆಇ ಸೊಸೈಟಿಗೆ ಗದ್ದುಗೆಯೇರಬೇಕು ಎಂಬ ನಮೋಶಿ ಅವರ ಯತ್ನ ಕೈಗೂಡಲಿಲ್ಲ.

‘ವಿಧಾನಪರಿಷತ್ ಸದಸ್ಯ, ಬಿಜೆಪಿ ಮುಖಂಡ ಬಿ.ಜಿ. ಪಾಟೀಲ ನೇರವಾಗಿ ಡಾ.ಭೀಮಾಶಂಕರ ಬಿಲಗುಂದಿ ಅವರ ಪರವಾಗಿ ಪ್ರಚಾರಕ್ಕಿಳಿದಿದ್ದು ಹಾಗೂ ನಮೋಶಿ ಅವರು ಎಚ್ಕೆಇ ಸೊಸೈಟಿಯ ಮತದಾರರನ್ನು ಸಂಪರ್ಕಿಸುವಲ್ಲಿ ಹಿಂದೆ ಬಿದ್ದಿದ್ದು ಸಹ ಅವರ ಹಿನ್ನಡೆಗೆ ಕಾರಣ’ ಎನ್ನಲಾಗುತ್ತಿದೆ.

ನೂತನ ಪದಾಧಿಕಾರಿಗಳು; ಪಡೆದ ಮತಗಳು
ಭೀಮಾಶಂಕರ ಬಿಲಗುಂದಿ (ಅಧ್ಯಕ್ಷ); 624
ಡಾ.ಶರಣಬಸಪ್ಪ ಹರವಾಳ (ಉಪಾಧ್ಯಕ್ಷ); 807
ಮಹಾದೇವಪ್ಪ ರಾಂಪೂರೆ (ಆಡಳಿತ ಮಂಡಳಿ ಸದಸ್ಯರು) 787
ಡಾ.ನಾಗೇಂದ್ರ ಎಸ್. ಮಂಠಾಳೆ; 680
ಡಾ.ಶರಣಬಸಪ್ಪ ಕಾಮರಡ್ಡಿ; 688
ಅರುಣಕುಮಾರ್ ಎಂ. ಪಾಟೀಲ; 649
ಕೈಲಾಸ್ ಪಾಟೀಲ; 581
ಸೋಮನಾಥ ನಿಗ್ಗುಡಗಿ; 567
ವಿನಯ ಎಸ್. ಪಾಟೀಲ; 570
ಬಸವರಾಜ ಖಂಡೇರಾವ್; 587
ಅನಿಲಕುಮಾರ್ ಪಟ್ಟಣ; 536
ಜಗನ್ನಾಥ ಬಿಜಾಪುರೆ; 524
ಸಾಯಿನಾಥ ಎನ್. ಪಾಟೀಲ; 516
ಎನ್. ಗಿರಿಜಾಶಂಕರ; 534
ರಜನೀಶ್ ವಾಲಿ; 544

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.