ಕಲಬುರ್ಗಿ: ದಿ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್‌ನ ಕಲಬುರ್ಗಿ ಘಟಕಕ್ಕೆ 2021– 2023ರ ಅವಧಿಗಾಗಿ ವಿವಿಧ 17 ವಿಭಾಗಗಳ ಸದಸ್ಯ ಸ್ಥಾನಕ್ಕಾಗಿ ಚುನಾವಣೆ ನಡೆಯಲಿದೆ. ಇದಕ್ಕೆ ನಾಮಪತ್ರ ಸಲ್ಲಿಸಲು ಆ. 11 ಕೊನೆಯ ದಿನ.

ಸಿವಿಲ್ ಎಂಜಿನಿಯರಿಂಗ್‍ನ ಮೂರು ಸ್ಥಾನ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಎರಡು ಸ್ಥಾನ, ಲೆಕ್ಟ್ರಿಕಲ್ ಎಂಜಿನಿಯರಿಂಗ್ ಎರಡು ಸ್ಥಾನ, ಎರೋಸ್ಪೇಸ್, ಅಗ್ರಿಕಲ್ಚರಲ್, ಕೆಮಿಕಲ್, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್, ಎನ್ವಿರಾನ್ಮೆಂಟಲ್, ಮೈನಿಂಗ್, ಆರ್ಕಿಟೆಕ್ಚರ್, ಮೆಟಲರ್ಜಿ, ಮೆಟೀರಿಯಲ್ಸ್ ಮತ್ತು ಪ್ರೊಡಕ್ಷನ್ ಎಂಜಿನಿಯರಿಂಗ್‍ನ ತಲಾ ಒಂದು ಸ್ಥಾನಕ್ಕಾಗಿ ಚುನಾವಣೆ ನಡೆಯಲಿದೆ.

ನಾಮಪತ್ರಗಳನ್ನು ಖುದ್ದಾಗಿ ಅಥವಾ ಪೋಸ್ಟ್ ಮೂಲಕ ‘ಡಾ.ಶರಣಬಸಪ್ಪ ಬಿ. ಪಾಟೀಲ, ಕನ್ವೇನರ್ ಬೋರ್ಡ್ ಆಫ್ ಎಂಜಿನಿಯರ್ಸ್, ದಿ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್, ಕಲಬುರ್ಗಿ– 585 102’ ಈ ವಿಳಾಸಕ್ಕೆ ಸಲ್ಲಿಸಬೇಕು.

ಆ. 13ರಿಂದ ಆ. 28ರೊಳಗೆ ನಾಮಪತ್ರ ವಾಪಸ್ ಪಡೆಯಬಹುದು. ಆ. 31ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಸೆಪ್ಟೆಂಬರ್ 6ರಿಂದ ಅಕ್ಟೋಬರ್ 22ರವರೆಗೆ ಆನ್‌ಲೈನ್ ಮೂಲಕ ಮತದಾನ ನಡೆಯಲಿದೆ. ಅ. 26ರಮದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ ಡಾ.ಶರಣಬಸಪ್ಪ ಬಿ. ಪಾಟೀಲ ತಿಳಿಸಿದ್ದಾರೆ.

ಈ ಅಸೋಸಿಯೇಷನ್‌ಗೆ ಕಲಬುರ್ಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳನ್ನೊಳಗೊಂಡು 1034 ಸದಸ್ಯರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.