ಕಲಬುರಗಿ: ‘ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಹಿಡಿದಿರುವಂತಹ ಹುಚ್ಚಿದೆಯಲ್ಲಾ, ಪ್ರಪಂಚದಲ್ಲಿ ಅದನ್ನು ವಾಸಿ ಮಾಡುವ ಯಾವುದೇ ಹುಚ್ಚಾಸ್ಪತ್ರೆ ಇಲ್ಲ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಿಂಚು ಹುಳುವಿನಷ್ಟು ಯೋಗ್ಯತೆ ಇಲ್ಲದೆ ಸೂರ್ಯನಿಗೆ ಉಗಿಯಲು ಹೋಗುತ್ತಾರೆ. ಆರ್ಎಸ್ಎಸ್, ಪ್ರಧಾನಿ ಮೋದಿ ಅವರನ್ನು ಟೀಕಿಸಲು ಏನು ಯೋಗ್ಯತೆ ಇದೆ? ದೇಶದಲ್ಲಿ ಆರ್ಎಸ್ಎಸ್ ಇಲ್ಲದಿದ್ದರೆ ಎಲ್ಲರನ್ನೂ ವಿಚಿತ್ರ ಪರಿಸ್ಥಿತಿಗೆ ತಂದು ಮತಾಂತರ ಮಾಡುತ್ತಿದ್ದರು. ಹಿಂದುತ್ವ ಉಳಿಯಲು ಆರ್ಎಸ್ಎಸ್ ಕಾರಣ’ ಎಂದರು.

‘ಮಹಾತ್ಮ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ಆರ್ಎಸ್ಎಸ್ ಶಿಬಿರಕ್ಕೆ ಭೇಟಿ ನೀಡಿ, ‘ನಾವು ಜಾತಿ ಹೋಗಲಾಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅದು ನಮ್ಮಿಂದ ಆಗಿರಲಿಲ್ಲ. ಆರ್ಎಸ್ಎಸ್ ಶಿಬಿರದಲ್ಲಿ ಯಾವುದೇ ಜಾತಿ ಇಲ್ಲದೆ, ಎಲ್ಲರೂ ಹಿಂದೂಗಳಂತೆ ವಾಸ ಮಾಡುತ್ತಿದ್ದಾರೆ. ಇದು ನಮಗೆ ಹೆಮ್ಮೆ’ ಎಂದು ಸ್ಪಷ್ಟವಾಗಿ ಹೇಳಿದ್ದರು. ಆರ್ಎಸ್ಎಸ್ ಬಗ್ಗೆ ಮಾತನಾಡಲು ನೀನು (ಪ್ರಿಯಾಂಕ್ ಖರ್ಗೆ) ಯಾರು’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.