ಭಾನುವಾರ, ಮೇ 29, 2022
22 °C
ಕನ್ನಡ, ಇಂಗ್ಲಿಷ್‌ ಭಾಷೆಯಲ್ಲಿ ವಿಷಯ ಮನವರಿಕೆ

ಸ್ಪರ್ಧಾತ್ಮಕ ಪರೀಕ್ಷೆಗೆ ‘ಮಾಸ್ಟರ್‌ ಮೈಂಡ್‌’ ಸಹಕಾರಿ: ನೀತಾ ಭೋಸ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ‘ಪ್ರಜಾವಾಣಿಯ ‘ಮಾಸ್ಟರ್‌ ಮೈಂಡ್‌’ ಆನ್‌ಲೈನ್‌ ಪತ್ರಿಕೆಯು ಸ್ಪರ್ಧಾತ್ಮಕ ಪರೀಕ್ಷೆಗೆಳನ್ನು ಸಮರ್ಥವಾಗಿ ಎದುರಿಸಲು ಪರಿಣಾಮಕಾರಿ ಮಾರ್ಗದರ್ಶಿಯಾಗಿದೆ’ ಎಂದು ಪ್ರಾಚಾರ್ಯರಾದ ನೀತಾ ಭೋಸ್ಲೆ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ‘ಉದ್ಯೋಗ ಕೋಶ’ ಹಾಗೂ ‘ಪ್ರಜಾವಾಣಿ ಮಾಸ್ಟರ್‌ ಮೈಂಡ್‌’ ಆನಲೈನ್‌ ಪತ್ರಿಕೆ ಸಹಯೋಗದಲ್ಲಿ ಸೋಮವಾರ ನಡೆದ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತಾ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಲು ಮತ್ತು ತರಬೇತಿ ಪಡೆಯಲು ದೊಡ್ಡ ನಗರಗಳಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಬೇಕು. ಪ್ರಜಾವಾಣಿಯ ಮಾಸ್ಟರ್‌ ಮೈಂಡ್‌ ಆನ್‌ಲೈನ್‌ ಪತ್ರಿಕೆಯು ಉಪಯುಕ್ತ ಮಾಹಿತಿ ನೀಡುತ್ತದೆ. ₹399ಕ್ಕೆ ಪತ್ರಿಕೆಯ 1 ವರ್ಷದ ಚಂದಾದಾರಿಕೆ ಪಡೆಯಬಹುದು. ಪತ್ರಿಕೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳಿಗೆ ವಸ್ತು ನಿಷ್ಟ, ವಿಷಯ ನಿಷ್ಟ ಅಂಶಗಳ ಕುರಿತು ವಿವರವಾದ ಮಾಹಿತಿ ಇರುತ್ತದೆ’ ಎಂದರು.

ಕಾಲೇಜಿನ ಉದ್ಯೋಗ ಕೋಶದ ಸಂಚಾಲಕ ಡಾ.ರಾಜಶೇಖರ ಯರಬಾಗಿ ಓಕಳಿ ಮಾತನಾಡಿ, ಪ್ರಜಾವಾಣಿಯ ‘ಎಕ್ಸಾಂ ಮಾಸ್ಟ್‌ರ್‌ ಮೈಂಡ್‌’ ಪ್ರತಿದಿನ ಪ್ರಕಟಗೊಳ್ಳುವುದರಿಂದ ವಾರದೊಳಗಿನ ಮಾಹಿತಿ ಸಹ ನಮಗೆ ಲಭ್ಯವಾಗುತ್ತದೆ. ಓದು, ದೃಶ್ಯ, ಶ್ರವ್ಯ ಮೂರು ಮಾಧ್ಯಮದಲ್ಲಿ ಕನ್ನಡ, ಇಂಗ್ಲಿಷ್‌ ಎರಡೂ ಭಾಷೆಯಲ್ಲಿ ಲಭ್ಯವಿದೆ’ ಎಂದರು.

ಉಪನ್ಯಾಸಕ ಡಾ.ರವಿ ಕುಂಟುಕುರೆ ಮಾತನಾಡಿ, ಪ್ರಜಾವಾಣಿ ಯಾವಾಗಲೂ ಗುಣಮಟ್ಟದ ಉತ್ಪನ್ನ ಮಾರುಕಟ್ಟೆಗೆ ತರುತ್ತದೆ. ಅದರಂತೆ ಈ ಮಾಸ್ಟರ್‌ ಮೈಂಡ್‌ ಸಹ ಅತ್ಯಂತ ಪರಿಣಾಮಕಾರಿಯಾಗಿದೆ’ ಎಂದರು.

‘ಪ್ರಜಾವಾಣಿ’ ಅರೆಕಾಲಿಕ ವರದಿಗಾರ ತೀರ್ಥಕುಮಾರ ಬೆಳಕೋಟಾ, ‘ಪ್ರಜಾವಾಣಿ’ ಕಲಬುರಗಿ ಪ್ರಸರಣಾ ಪ್ರತಿನಿಧಿ ಉಮಾಕಾಂತ ಧಾಖಲಿ, ಉಪನ್ಯಾಸಕ ಡಾ.ಶಿವಶರಣಪ್ಪ ಬೆಣ್ಣೂರ, ತಾಲ್ಲೂಕು ಕ್ಷೇತ್ರ ಯೋಜನಾಧಿಕಾರಿ ಕಲ್ಲಣಗೌಡ ಎಸ್‌. ಇದ್ದರು. ವಿದ್ಯಾರ್ಥಿ ಸುಧಾಕರ ಗೋಪು ಅವರ ಚಂದಾದಾರಿಕೆ ಪಡೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು