ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲೂ ರೈತ ದಂಪತಿ ಕೈಹಿಡಿದ ಮಾವು: ದೇಸಿ ಪದ್ಧತಿಯಲ್ಲಿ ಹಣ್ಣಾಗಿಸಿ ಮಾರಾಟ

Last Updated 22 ಜೂನ್ 2021, 1:18 IST
ಅಕ್ಷರ ಗಾತ್ರ

ವಾಡಿ: ಕೋವಿಡ್‌ನಿಂದ ಮಾವು ಮಾರುಕಟ್ಟೆ ಕುಸಿತವಾಗಿರುವುದರ ನಡುವೆಯೇ ಅಳ್ಳೊಳ್ಳಿ ಗ್ರಾಮದ ರೈತ ದಂಪತಿ ರಾಜಶೇಖರ ಮಾಲಿಪಾಟೀಲ ಮತ್ತು ಬಸಲಿಂಗಮ್ಮ ಅವರಿಗೆ ಒಂದಿಷ್ಟು ಲಾಭವಾಗಿದೆ.

ಲಾಕ್‌ಡೌನ್‌ನಿಂದ ಹೊರ ಜಿಲ್ಲೆಗಳಿಗೆ ಮಾವು ಸಾಗಾಟ ಸ್ಥಗಿತವಾಗಿತ್ತು. ವಾಹನ ಹಾಗೂ ಇತರೆ ಸಾರಿಗೆ ವ್ಯವಸ್ಥೆ ಇಲ್ಲದರ ನಡುವೆಯೂ ದಂಪತಿ ಮನೆ ಹಾಗೂ ತೋಟದಲ್ಲಿಯೇ ಮಾವಿನ ಹಣ್ಣುಗಳನ್ನು ಮಾರಾಟ ಮಾಡಿ ಸೈಎನಿಸಿಕೊಂಡರು.

ದಂಪತಿ ತಮ್ಮ ಎರಡು ಎಕರೆ ತೋಟದಲ್ಲಿ 16 ವರ್ಷಗಳ ಹಿಂದೆ ನಾಟಿ ಮಾಡಿದ್ದ ವಿವಿಧ ತಳಿಯ 102 ಮಾವಿನ ಗಿಡಗಳು ರಸಭರಿತ ಹಣ್ಣು ನೀಡುತ್ತಿವೆ. ಇದು ದಂಪತಿಯ ಆರ್ಥಿಕತೆ ಬಲಪಡಿಸಿದೆ. ಮಲ್ಲಿಕಾ, ಬೆನಿಷನ್, ಮಲಗೂಬ್, ಕೆಸರ್ ತಳಿಯಂತಹ ಮಾವಿನ ಗಿಡಗಳಿದ್ದು, ಒಂದೊಂದು ಗಿಡ 5 ಕ್ವಿಂಟಲ್‌ ಇಳುವರಿ ನೀಡಿವೆ.

ಲಾಡ್ಲಾಪೂರದಿಂದ ಅಳ್ಳೊಳ್ಳಿಗೆ ತೆರಳುವ ಮುಖ್ಯರಸ್ತೆಯ ಪಕ್ಕದಲ್ಲಿ ತೋಟವಿದೆ. ಕೋವಿಡ್‌ನಿಂದ ಜನರು ಮಾರುಕಟ್ಟೆಗೆ ಹೋಗಲು ಸಾಧ್ಯವಾಗಿಲ್ಲ. ಮಾವಿನತೋಟಕ್ಕೆ ಬಂದು ರಸಭರಿತ ಮಾವಿನ ಹಣ್ಣುಗಳನ್ನು ಜನರು ಖರೀದಿ ಮಾಡಿದ್ದು ರೈತ ದಂಪತಿಗೆ ನೆಮ್ಮದಿಗೆ ಕಾರಣವಾಗಿದೆ.

‘ಮಾರ್ಚ್ ತಿಂಗಳಿನಿಂದ ಜೂನ್ ಮೊದಲ ವಾರದವರೆಗೆ ಮಾವಿನ ಗಿಡಗಳು ಫಸಲು ನೀಡಿದೆ. 102 ಗಿಡದಿಂದ ಈ ವರ್ಷ ಒಟ್ಟು 50 ಕ್ವಿಂಟಲ್‌ಗೂ ಅಧಿಕ ಫಸಲು ಬಂದಿದೆ. ಪ್ರತಿ ಕೆ.ಜಿಗೆ ₹ 30ರಿಂದ ₹60 ತನಕ ಮಾರಾಟ ಮಾಡಿದ್ದೇವೆ. ಈ ವರ್ಷ ₹ 2 ಲಕ್ಷದಷ್ಟು ಮಾವು ಮಾರಾಟ ಆಗಿದ್ದು, ಖರ್ಚು ಕಳೆದು ₹ 80,000 ಆದಾಯ ಸಿಕ್ಕಿದೆ‘ ಎನ್ನುತ್ತಾರೆ ರೈತ ಮಹಿಳೆ ಬಸಲಿಂಗಮ್ಮ ಪಾಟೀಲ.

‘ವರ್ತಕರು ತೋಟಕ್ಕೆ ಬಂದು ಖರೀದಿ ಮಾಡಿದ್ದಕ್ಕಿಂತ ಹೆಚ್ಚಾಗಿ ಜನರೇ ಬಂದು ಕೆ.ಜಿ. ಗಟ್ಟಲೆ ಹಣ್ಣು ಖರೀದಿಸಿದ್ದಾರೆ. ಮಾವಿನ ಕಾಯಿಗಳನ್ನು ಯಾವುದೇ ರಾಸಾಯನಿಕವಿಲ್ಲದೆದೇಸಿ ಪದ್ದತಿಯಿಂದ ಮಾಗಿಸಿ ಹಣ್ಣು ಮಾಡಿದ್ದೇವೆ. ಪ್ರತಿ ಗಿಡಕ್ಕೆ 40 ಕೆ.ಜಿ. ಕುರಿಗೊಬ್ಬರ, ನಾಲ್ಕು ಬಾರಿ ಔಷಧ ಸಿಂಪಡಣೆ ಮಾಡಿದರೆ ಆಯ್ತು. ರಸಭರಿತ ಹಣ್ಣುಗಳು ಕೈಸೇರುತ್ತವೆ. ಇತರೆ ಬೇಸಾಯದ ಜತೆ ಮಾವಿನ ಕೃಷಿ ಅತಿ ಹೆಚ್ಚು ಲಾಭ ತಂದು ಕೊಟ್ಟಿದೆ.ಮಾವಿನ ತೋಟದ ಸುಂದರ ಪರಿಸರದಲ್ಲಿ ವಾಸವಿದ್ದು ಖುಷಿ ನೀಡುತ್ತಿದೆ‘ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ರೈತ ದಂಪತಿ.

***

*ಬೆಳೆದ 102 ಮಾವಿನ ಗಿಡಗಳು ಉತ್ತಮ ಫಸಲು ನೀಡುತ್ತಿವೆ. ಕೊವೀಡ್ ಸಂಕಷ್ಟದಲ್ಲೂ ಸ್ಥಳೀಯರು ತೋಟಕ್ಕೆ ಬಂದು ಮಾವು ಖರೀದಿಸಿದರು.

- ಬಸಲಿಂಗಮ್ಮ ಪಾಟೀಲ, ರೈತ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT