ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಜಿಲ್ಲೆಯಾದ್ಯಂತ ಕಾರ‌ ಹುಣ್ಣಿಮೆ ಸಡಗರ

Last Updated 24 ಜೂನ್ 2021, 6:58 IST
ಅಕ್ಷರ ಗಾತ್ರ

ಕಲಬುರ್ಗಿ: ಮುಂಗಾರು ಹಂಗಾಮಿನ ಸಿದ್ಧತೆ ನಡೆದಿರುವ ಮಧ್ಯೆಯೇ ಜಿಲ್ಲೆಯ ವಿವಿಧೆಡೆ ರೈತರು ತಮ್ಮ ಎತ್ತುಗಳಿಗೆ ಅಲಂಕಾರ ಮಾಡಿ ಗ್ರಾಮದಲ್ಲಿ ಓಡಾಡಿಸುವ ಮೂಲಕ ಕಾರ ಹುಣ್ಣಿಮೆ ‌ಆಚರಿಸಿದರು.

ರೈತರಿಗೆ ಕಾರ ಹುಣ್ಣಿಮೆ ವಿಶೇಷ ಹಬ್ಬವಾಗಿದ್ದು, ಕೃಷಿ ಚಟುವಟಿಕೆಗಳಲ್ಲಿ ನೆರವಾಗುವ ಎತ್ತುಗಳೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿರುತ್ತಾರೆ.

ಬೆಳಿಗ್ಗೆ ಎತ್ತುಗಳ ಮೈತೊಳೆದು ಅವುಗಳಿಗೆ ಅರಿಸಿಣ, ಕುಂಕುಮ ಹಚ್ಚಿ ಪೂಜೆ ಮಾಡುತ್ತಾರೆ. ಎತ್ತುಗಳ ಕೋಡುಗಳಿಗೆ ಬಣ್ಣ ಬಳಿಯುತ್ತಾರೆ. ಕುತ್ತಿಗೆಗೆ ಅಲಂಕಾರಿಕ ಹಗ್ಗ, ಗೊಂಡೆ ಕಟ್ಟಿ‌ ಸಿಂಗರಿಸುತ್ತಾರೆ.

ಸಂಜೆ ಅಗ್ನಿಯಲ್ಲಿ ಹಾಯಿಸುವ ಮೂಲಕ 'ಕರಿ' ಹರಿಯುವ ಶಾಸ್ತ್ರ ಮುಗಿಸುತ್ತಾರೆ.

ಕಾರ ಹುಣ್ಣಿಮೆ ಅಂಗವಾಗಿಎತ್ತುಗಳಿಗೆ ಅಲಂಕಾರ ಮಾಡಿರುವುದು
ಕಾರ ಹುಣ್ಣಿಮೆ ಅಂಗವಾಗಿಎತ್ತುಗಳಿಗೆ ಅಲಂಕಾರ ಮಾಡಿರುವುದು

ಜಿಲ್ಲೆಯ ಗ್ರಾಮೀಣ ‌ಪ್ರದೇಶಗಳಲ್ಲಿ‌ ಕಾರ ಹುಣ್ಣಿಮೆ ಅಂಗವಾಗಿ ‌ಸಿಹಿ ಅಡುಗೆ ತಯಾರಿಸಿ ಊಟ ಮಾಡುತ್ತಾರೆ. ಎತ್ತುಗಳ ವಿಶೇಷ ಆರೈಕೆ ಮಾಡುತ್ತಾರೆ.

ಕಾರ ಹುಣ್ಣಿಮೆ ದಿನವಾದ ಇಂದು (ಗುರುವಾರ) ಎತ್ತುಗಳಿಗೆ ಕೃಷಿ ಚಟುವಟಿಕೆಗಳಿಂದ ಬಿಡುವು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT