ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯ ರೂಪಿಸುವಲ್ಲಿ ಸಂಸ್ಕಾರ ಮುಖ್ಯ: ಬಾಬುರಾವ ಶೇರಿಕಾರ

ಜಿಲ್ಲಾ ಕಸಾಪದಿಂದ ಪಿಯುಸಿ ಅಂಕವೀರರಿಗೆ ಅಭಿನಂದನೆ
Published 23 ಏಪ್ರಿಲ್ 2024, 5:01 IST
Last Updated 23 ಏಪ್ರಿಲ್ 2024, 5:01 IST
ಅಕ್ಷರ ಗಾತ್ರ

ಕಲಬುರಗಿ: ‘ಕನ್ನಡ ನಾಡು-ನುಡಿ ಬಗ್ಗೆ ಅಭಿಮಾನದ ಮೂಲಕ ಭವಿಷ್ಯದ ಜೀವನ ಕಟ್ಟಿಕೊಳ್ಳಲು ಸಂಸ್ಕಾರಯುತ ಶಿಕ್ಷಣ ಮುಖ್ಯವಾಗಿದೆ’ ಎಂದು ಪಿಡಿಎ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಬಾಬುರಾವ ಶೇರಿಕಾರ ಹೇಳಿದರು.

ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ಪದವಿಪೂರ್ವ ಪರೀಕ್ಷೆಯ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವಿದ್ಯೆ ಕಲಿಸಿದ ತಂದೆ-ತಾಯಿ ಹಾಗೂ ಗುರು ಹಿರಿಯರನ್ನು ಗೌರವಿಸುವ ಪರಂಪರೆಯನ್ನು ಮಕ್ಕಳು ಕಲಿಯಬೇಕು. ಅಂತಹ ಮನವೀಯ ಅಂತಃಕರಣ ಬೆಳೆಸುವ ಹಾಗೂ ಜೀವನ ಮೌಲ್ಯ ಬೋಧಿಸುವ ಶಿಕ್ಷಣ ಕಲಿಯಬೇಕು. ತಂದೆ–ತಾಯಿಯನ್ನು ಅನಾಥರನ್ನಾಗಿಸದೇ ಅವರನ್ನು ಆರೋಗ್ಯದಿಂದ ನೋಡಿಕೊಳ್ಳುವ ಸಂಸ್ಕೃತಿ ಬೇಕಿದೆ. ಉನ್ನತ ಶಿಕ್ಷಣದ ಜತೆಗೆ ಮೌಲ್ಯಯುತ ಸಂಸ್ಕಾರ ಬೇಕು. ನಂತರದಲ್ಲಿ ಸಮಾಜ ಸೇವೆ ಕೈಗೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ‘ವಿದ್ಯಾರ್ಥಿಗಳ ಜೀವನ ತಪಸ್ಸು ಇದ್ದಂತೆ. ಪ್ರಯತ್ನ ಮಾತ್ರ ನಿರಂತರವಾಗಿದ್ದರೆ ಮುನ್ನಡೆ ಸಾಧ್ಯ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಅಯೋಜಿಸಲಾಗಿದೆ ಎಂದು ಹೇಳಿದರು.

ಮಹಿಳಾ ಪತಂಜಲಿ ಯೋಗ ಸಮಿತಿಯ ಸಂವಾದ ಪ್ರಭಾರಿ ಸುಮಂಗಲಾ ಚಕ್ರವರ್ತಿ, ಎಕೆಆರ್ ದೇವಿ ಪಿಯು ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ, ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಶಿವರಾಜ ಎಸ್. ಅಂಡಗಿ, ಧರ್ಮಣ್ಣ ಎಚ್. ಧನ್ನಿ, ರೇವಣಸಿದ್ದಪ್ಪ ಜೀವಣಗಿ, ಮುಡುಬಿ ಗುಂಡೇರಾವ, ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ರಮೇಶ ಬಡಿಗೇರ, ಮಲ್ಲಿನಾಥ ಸಂಗಶೆಟ್ಟಿ, ಎಚ್.ಎಸ್. ಬರಗಾಲಿ, ಎಂ.ಎನ್.ಸುಗಂಧಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ಸುರೇಶ ದೇಶಪಾಂಡೆ, ಸಂತೋಷ ಕುಡಳ್ಳಿ, ಗುರುಬಸಪ್ಪ ಸಜ್ಜನಶೆಟ್ಟಿ, ಗುಂಡಪ್ಪ ಕಾಟೇಕರ, ಪ್ರಭುಲಿಂಗ ಮೂಲಗೆ, ವಿನೋದಕುಮಾರ ಜೇನವೇರಿ, ಸ್ವಾತಿ ಬೆಳಕೇರಿ, ಶಿವಶರಣ ಹಡಪದ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT